ಮಸ್ಕಿ ಮೇ 16.ಕರ್ನಾಟಕ ರಾಜ್ಯದ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಭದ್ರತೆಗಾಗಿ ಆಗಮಿಸಿದಂತಹ ಭಾರತೀಯ ಪ್ಯಾರಾ ಮಿಲಿಟರಿ ಪಡೆಯಾದ CRPF B/95 ವಾರಣಾಸಿ ಬೆಟಾಲಿಯನ್ ನ ಯೋಧರು ಬಹಳ ಯಶಸ್ವಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿ ನಮ್ಮ ಮಸ್ಕಿಯಿಂದ ತೆರಳುವ ಸಮಯದಲ್ಲಿ ಅಭಿನಂದನ್ ಸಂಸ್ಥೆಯ ವತಿಯಿಂದ ವೀರ ಯೋಧರಿಗೆ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ದೇಶದ ರಕ್ಷಣಾ ಗಾಗಿ ಪಣತೊಟ್ಟು ನಿಂತಿರುವ ವೀರ ಯೋಧರ ಪರವಾಗಿ ಐದು ಜನ ಯೋಧರನ್ನು ಸನ್ಮಾನಿಸುವ ಮೂಲಕ ಎಲ್ಲಾ ಭಾರತದ ಎಲ್ಲಾ ಯೋಧರಿಗೆ ಗೌರವವನ್ನು ಅರ್ಪಿಸಲಾಯಿತು.
ವೀರ ಯೋಧರಿಗೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಅವರನ್ನು ಗೌರವ ಪೂರ್ವಕವಾಗಿ ಬೇಲ್ಕೊಡಲಾಯಿತು.
ಈ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಲಾಗಿರುವ ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳಿಗೆ ಅಗತ್ಯ ಶಿಕ್ಷಣದ ಸಮಗ್ರಗಳು, ಕ್ರೀಡಾ ಸಾಮಗ್ರಿಗಳು, ದಿನಬಳಕೆಯ ಸಾಮಗ್ರಿಗಳು ಹಾಗೂ ಇನ್ನಿತರ ಆಹಾರ ಸಾಮಗ್ರಿಗಳನ್ನು ಒದಗಿಸುವ ಮೂಲಕ ಮಕ್ಕಳಿಗೆ ಆಶೀರ್ವಾದವನ್ನು ವೀರ ಯೋಧರು ಮಾಡಿದರು.
ಮತ್ತು ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳಿಗೆ ಹಾಗೂ ಅಲ್ಲಿನ ಸಿಬ್ಬಂದಿಗಳಿಗೆ ತಮ್ಮ ಕೈಯಾರೆ ಅಡುಗೆಯನ್ನು ತಯಾರಿಸುವುದರ ಮೂಲಕ ಮಕ್ಕಳೊಂದಿಗೆ ಬೆರೆತು ಎಲ್ಲರಿಗೂ ಭೋಜನ ವ್ಯವಸ್ಥೆ ಕಲ್ಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ CRPF B/95 ನ DSP ಆದಂತಹ ಶ್ರೀ ಹನುಮಾನ ಸಿಂಗ್ ಅವರು ಪುಲ್ವಾಮಾ ದಾಳಿಗೆ ವಿರುದ್ಧ ಮಾಡಿದಂತಹ ಸರ್ಜಿಕಲ್ ಸ್ಟ್ರೈಕ್ ನ ವೀರ ಯೋಧ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರ ಹೆಸರಿನಲ್ಲಿ ಆರಂಭಿಸಿದಂತಹ ಅಭಿನಂದನ್ ಸ್ಪೂರ್ತಿದಾಮದ ಮಕ್ಕಳ ಎಲ್ಲಾ ಕಾರ್ಯ ಚಟುವಟಿಕೆಗಳು ಹಾಗೂ ಅವರ ಶಿಸ್ತು ನಮ್ಮ ಮಿಲಿಟರಿ ಪಡೆಗಳ ಕಾರ್ಯವೈಖರಿಯಂತೆ ಕಂಡುಬಂದಿರುವುದು ಬಹಳ ಮೆಚ್ಚುಗೆಯ ಅಂಶವಾಗಿದೆ.
ಈ ಮಕ್ಕಳ ಭವಿಷ್ಯ ಉಜ್ವಲವಾಗಲಿ ಅವರೊಂದಿಗೆ ನಾವು ಸದಾ ಕಾಲದಲ್ಲಿ ಇರುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸಿ ಆರ್ ಪಿ ಎಫ್ ನ ಅಧಿಕಾರಿಗಳಾದ ದೀಪಕ್ ಸಿಂಗ್, ಡಿ ಎಸ್ ಯಾದವ್, ರಮಾನಂದ, ಹಿರಿಯರಾದ ಯಲ್ಲಪ್ಪ ಮಾಸ್ಟರ್, ಅಮರಪ್ಪ ಗುಡದುರು, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಸದಸ್ಯರಾದ ಕಳಕಪ್ಪ ಹಾದಿಮನಿ, ಮಹಾಂತೇಶ ಎಚ್, ಮಹೇಶ್ ಶೆಟ್ಟರ್, ಜಾಫರ್ ಮಿಯಾ, ಮಲ್ಲಿಕಾರ್ಜುನ ಬಡಿಗೇರ್ ಹಾಗೂ ಸಿ ಆರ್ ಪಿ ಎಫ್ ನ ಅಧಿಕಾರಿಗಳು ಉಪಸ್ಥಿತರಿದ್ದರು.