ಸಿಂಧನೂರು ಜುಲೈ 25.ರಾಜ್ಯ ಸರ್ಕಾರದ ವತಿಯಿಂದ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು ಸಿಂಧನೂರು ತಾಲೂಕಾದ್ಯಂತ ಯೋಜನೆಗೆ ಭರ್ಜರಿ ಅರ್ಜಿಗಳು ಸಲ್ಲಿಕೆಯಾಗುತಿದ್ದು ನಾಗರೀಕರು ಅರ್ಜಿ ಸಲ್ಲಿಸುವಾಗ ಬಾಪೂಜಿ ಸೇವ ಕೇಂದ್ರ ,ಗ್ರಾಮಒನ್, ಕರ್ನಾಟಕ ಒನ್ ಹೀಗೆ ಸರ್ಕಾರದ ವತಿಯಿಂದ ಮಾನ್ಯತೆ ಪಡೆದು ಅರ್ಜಿಗಳನ್ನ ಸಲ್ಲಿಸುವ ಸೇವ ಕೇಂದ್ರಗಳು ಅರ್ಜಿದಾರರಿಂದ ಮನಬಂದಂತೆ 100 ,200, 500 ರವರೆಗೆ ಹಣವನ್ನು ವಸೂಲಿ ಮಾಡುವ ದಂದೆ ಸಿಂಧನೂರು ತಾಲೂಕಾದ್ಯಂತ ನಡೆಯುತ್ತಿದೆ ಇದನ್ನು ನಿಲ್ಲಿಸುವಂತೆ ಕೆಆರ್ಎಸ್ ಪಕ್ಷದ ವತಿಯಿಂದ ಮಾನ್ಯ ತಹಸಿಲ್ದಾರ್ ಸಿಂಧನೂರು ಅವರಿಗೆ ದೂರು ಮತ್ತು ಮನವಿಯನ್ನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಕೆ ಗೊಮರ್ಸಿ ಸಿಂಧನೂರು ತಾಲೂಕಾಧ್ಯಂತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಹಲವಾರು ಸೇವ ಕೇಂದ್ರಗಳಲ್ಲಿ ಅಕ್ರಮವಾಗಿ ಅರ್ಜಿದಾರರಿಂದ ಹಣ ವಸೂಲಿ ಮಾಡುವ ದಂಧೆ ಹಗಲು ದರೋಡೆ ರೂಪದಲ್ಲಿ ನಡೆಯುತ್ತಿದ್ದು ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಂತ ಗ್ರಾಮಒನ್, ಬಾಪೂಜಿ ಸೇವ ಕೇಂದ್ರ, ಕರ್ನಾಟಕಒನ್ ಈ ಕೇಂದ್ರಗಳ ಮಾಲೀಕರು ಅನ್ಯ ಸೇವ ಕೇಂದ್ರಗಳಿಗೆ ತಮ್ಮ ಲಾಗಿನ್ ಐಡಿಯನ್ನು ನೀಡಿ ಅವರಿಂದ ಹಣವನ್ನ ಪಡೆದು ಅಲ್ಲಿ ಜನಸಾಮಾನ್ಯರ ಹತ್ತಿರ ಹಣವನ್ನು ಪಡೆಯುವ ಉದಾಹರಣೆಗಳು ಸಿಂಧನೂರು ತಾಲೂಕಾಧ್ಯಂತ ನಡೆಯುತ್ತಿದ್ದು ಈ ವಿಷಯದ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೆ ಮೌಖಿಕವಾಗಿ ದೂರನ್ನು ನೀಡಲಾಗಿದೆ ಈಗ ತಹಶೀಲ್ದಾರರು ಸಿಂಧನೂರ ಇವರಿಗೂ ಕೂಡ ಪಕ್ಷದ ವತಿಯಿಂದ ಮನವಿ ಮತ್ತು ದೂರನ್ನು ನೀಡಲಾಯಿತು ಎಂದರು. ರಾಜ್ಯ ಸರ್ಕಾರವು ಸೇವಾ ಕೇಂದ್ರಗಳಿಗೆ ಒಂದು ಅರ್ಜಿಗೆ 12 ರೂಪಾಯಿ ನೀಡುತ್ತಿದ್ದು ಇದನ್ನು ಲೆಕ್ಕಿಸದೆ ಅವ್ಯವಹಾರ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಮಾನ್ಯ ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಹಣ ಪಡೆಯುತ್ತಿರುವ ಸೇವ ಕೇಂದ್ರಗಳು ಹಾಗೂ ಸೈಬರ್ ಸೆಂಟರ್ ಗಳ ವಿರುದ್ಧ ದೂರುಗಳನ್ನು ದಾಖಲಿಸಿಕೊಂಡು ಅವರ ವಿರುದ್ಧ ಎಫ್ ಐ ಆರ್ ಮಾಡಬೇಕೆಂದು ದೂರು ಮತ್ತು ಮನವಿಯಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು ಹಾಗೂ ಯಾವುದೇ ಸೇವಾ ಕೇಂದ್ರಗಳಲ್ಲಿ ಅರ್ಜಿದಾರರು ಯಾವುದೇ ಹಣ ಪಾವತಿ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷ ಚನ್ನಬಸವ ಸೋಮಲಾಪುರ್ ಕಾರ್ಯದರ್ಶಿ ಶರಣಪ್ಪ ಗೊರವ ಶರಣಪ್ಪ ಅಂಚಿನಾಳ್ ದ್ಯಾವಣ್ಣ ಕೃಷ್ಣ ಸುಕಲ್ಪೇಟೆ ಅಮರೇಶ ಶಂಕರ್ ನಾಯಕ್ ಹಾಗೂ ಪಕ್ಷದ ಮುಖಂಡರು ಭಾಗಿಯಾಗಿದ್ದರು