ಏಪ್ರಿಲ್ 16. ಸಿಂಧನೂರು ಸುಕ್ಷೇತ್ರ ಯದ್ದಲದೊಡ್ಡಿ ಮಠದ ವತಿಯಿಂದ ಒಳಬಳ್ಳಾರಿ ಚನ್ನಬಸವ ತಾತನವರ ಆಶೀರ್ವಾದದೊಂದಿಗೆ ಪೂಜ್ಯರಾದ ಶ್ರೀ ಶ್ರೀ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಇವರ ಸಮ್ಮುಖದಲ್ಲಿ ಕಾಶಿಯಾತ್ರೆ ಪರಿಪೂರ್ಣಗೊಂಡಿತು ಯಾತ್ರೆಯಲ್ಲಿ ಜಿಲ್ಲೆಯ ಜವಳಗೇರಾ, ದಿನಸಮುದ್ರ , ವೀರಾಪುರ, ಚಿಕ್ಕ ಹೆಸರೂರು, ನವಲಕಲ್ ಹೀಗೆ ಬೇರೆ ಬೇರೆ ಭಾಗಗಳಿಂದ ಬಂದಂತ ಭಕ್ತಾದಿಗಳಿಗೆ ಕಾಶಿಯಾತ್ರೆಯನ್ನು ಮಾಡಿಸಲಾಯಿತು.
ಕಾಶಿಯಲ್ಲಿ ಶ್ರೀ ವಿಶ್ವನಾಥನ ದರ್ಶನ, ಅನ್ನಪೂರ್ಣೇಶ್ವರಿ ಹಾಗೂ ವಿಶಾಲಾಕ್ಷಿ ದೇವಿ ಶಕ್ತಿ ಪೀಠ, ಸಾರನಾಥ ಸ್ತೂಪ, ಬನಾರಸ್ ಹಿಂದೂ ಯುನಿವರ್ಸಿಟಿ, ಗಂಗಾ ನದಿ ತೀರದಲ್ಲಿ ಗಂಗಾರತಿ ವೀಕ್ಷಣೆ, ಜಂಗಮವಾಡಿ ಮಠ, ಅಲಹಾಬಾದ್ ತ್ರಿವೇಣಿ ಸಂಗಮ, ಅಲೊಪಿದೇವಿ ಶಕ್ತಿಪೀಠ, ಬಡೇ ಹನುಮಾನ್ ಮಂದಿರ ಹೀಗೆ ಅಲ್ಲಿನ ವಿವಿಧ ದೇವಸ್ಥಾನಗಳನ್ನು ನೋಡಿಕೊಂಡು ಭಕ್ತರು ಪುನೀತರಾದರು.
ಯಾತ್ರೆಯಲ್ಲಿ ಕಲ್ಲೂರು ಶಂಭುಲಿಂಗ ಸ್ವಾಮಿಗಳು, ಸಿರುಗುಪ್ಪ ಬಸವಭೂಷಣ ಸ್ವಾಮಿಗಳು ಪಾಲ್ಗೊಂಡಿದ್ದರು ಪ್ರಮುಖ ಯಾತ್ರಿಕರಾದ ಜವಳಗೆರೆ ಎಂ ಗಂಗಣ್ಣ, ಎಂ ಅಮರೇಶ್, ಸಿದ್ದನಗೌಡ ಯದ್ದಲ ದೊಡ್ಡಿ, ನವಲಕಲ್ ಬಸವಂತರಾಯ ಹೀಗೆ ವಿವಿಧ ಭಕ್ತಾದಿಗಳು ಪಾಲ್ಗೊಂಡು ಕಾಶಿಯಾತ್ರೆಯನ್ನು ಸಂಪೂರ್ಣಗೊಳಿಸಿದರು.
ಪೂಜ್ಯರಾದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು ಎನ್ನುವ ಹಂಬಲವಿರುತ್ತದೆ ಅಂತವರಿಗೆ ಕಾಶಿಯಾತ್ರೆಯನ್ನು ಮಾಡಿಸಿದ್ದೇವೆ, ಯಾತ್ರೆಯಲ್ಲಿ ಒಳ್ಳೆಯ ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಇರುತ್ತದೆ ಎಂದು ಹೇಳಿದರು.
ಯಾತ್ರೆಯ ಆಯೋಜಕರಾದ ಶಿವನಗೌಡ ಶಿವ ಟೂರ್ಸ್ ಅಂಡ್ ಟ್ರಾವೆಲ್ಸ್ ಸಿಂಧನೂರು ಇವರು ಮಾತನಾಡಿ ಯಾರಾದರೂ ಯಾತ್ರೆ ಮಾಡುವ ಹಂಬಲವಿದ್ದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಯಾತ್ರೆಗೆ ಕರೆದುಕೊಂಡು ಹೋಗಿ ಉತ್ತಮವಾದ ಊಟ, ವಸತಿ, ವಾಹನದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು ನಮ್ಮನ್ನು ಸಂಪರ್ಕಿಸಿದಲ್ಲಿ ಯಾತ್ರೆಯ ಮಾಹಿತಿಯನ್ನು ನೀಡುತ್ತೇವೆ ಎಂದರು. ಸಂಪರ್ಕಿಸುವ ಮೊಬೈಲ್ ನಂಬರ್ 9964956524