ಏಪ್ರಿಲ್ ೦7. ಸಿಂಧನೂರು 2023 – ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ನಿಮಿತ್ತ ಇಂದು ತಾಲ್ಲೂಕಿನ ಕೆ.ಬಸಾಪುರ ಗ್ರಾಮದಲ್ಲಿ ಮಹಿಳಾ ಮುಖಂಡರನ್ನು, ಕಾರ್ಯಕರ್ತರನ್ನು ಬೇಟಿಮಾಡಿ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿನ ಬಗ್ಗೆ ಮನೆ-ಮನ ಮುಟ್ಟುವಂತೆ ವಿವರಿಸಿ ಅವರ ಜೊತೆಗೆ ಚರ್ಚಿಸಿದರು, ಜೊತೆಗೆ ಕಾಂಗ್ರೆಸ್ ಆಡಳಿತದ ಬಗ್ಗೆ ಜನರಿಗೆ ತಿಳಿಸಿ ಪಕ್ಷದ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿಗಳು,ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭೆ ಕ್ಷೇತ್ರದ ಮಹಿಳಾ ಘಟಕದ ಉಸ್ತುವಾರಿಯಾದ *ಶ್ರೀಮತಿ ಶ್ರೀದೇವಿ ಗಂಡ ಶ್ರೀನಿವಾಸ, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಗಂಡ ಶಿವರಾಜ, ಶ್ರೀಮತಿ ಕೌಶಲ್ಯ ಸೇರಿದಂತೆ ಗ್ರಾಮದ ಮಹಿಳೆಯರು ಉಪಸ್ಥಿತರಿದ್ಧರು.