ಇದು ಬಡವರ ಬಾರಕೋಲು ಪತ್ರಿಕೆಯ ಕಳಕಳಿ ವಿನಂತಿ
ಮೇ 17. SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿನಿ ಪದವಿ ಸೇರಲು ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆ ಎದುರಾಗಿದ್ದು, ವಿದ್ಯಾಭ್ಯಾಸ ಅರ್ಧಕ್ಕೆ ಕೈ ಬಿಡುವಂತಹ ಪರಿಸ್ಥಿತಿ.
ಹೌದು ಬೀದರ್ ಜಿಲ್ಲೆಯ ಔರಾದ ತಾಲೂಕಿನ ಯನಗುಂದಾ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಬಸವಜ್ಯೋತಿ ಬಾಬುಗೊಂಡ SSLC ಪರೀಕ್ಷೆಯಲ್ಲಿ ಶೇ.92.48ರಷ್ಟು ಅಂಕ ಗಳಿಸಿದ್ದಾಳೆ. ಆದರೆ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಕೆಯ ಬಳಿ ಹಣವಿಲ್ಲ. ಪ್ರವೇಶಾತಿ ಮಾಡಿಸಲು ಆಕೆಯ ಪೋಷಕರಿಲ್ಲ.
ವಿದ್ಯಾರ್ಥಿನಿ ಬಸವ ಜ್ಯೋತಿ ಹುಟ್ಟುವ ಮುನ್ನವೇ ತಂದೆಯನ್ನು ಕಳೆದುಕೊಂಡ ಅಜ್ಜಿ ಮತ್ತು ತಾತನೊಡನೆ ಬೆಳೆದಳು. ವಯಸ್ಸಾದ ಜೀವಕ್ಕೆ ಮೊಮ್ಮಗಳನ್ನು ಓದಿಸುವ ಬೆಟ್ಟದಷ್ಟು ಆಶಯವಿದೆ. ತಾತ ಮತ್ತು ಅಜ್ಜಿಗೆ, ದುಡಿದು ಪದವಿಗೆ ಸೇರಿಸಲು ಶಕ್ತಿ ಇಲ್ಲ . ಪ್ರತಿಭಾವಂತೆ ಆಗಿದ್ದರೂ ಮುಂದೆ ವಿದ್ಯಾಭ್ಯಾಸ ಮಾಡಿಸಲಾಗದ ಅಸಹಾಯಕ ಪರಿಸ್ಥಿತಿ. ದುಡಿದು ಹೊಟ್ಟೆ ತುಂಬಿದರೆ ಸಾಕು ಎನ್ನುವ ಕಿತ್ತು ತಿನ್ನುವ ಬಡತನ ಅವರಲ್ಲಿ ಮನೆ ಮಾಡಿದೆ.
ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಸಲ್ಲಿಸಬೇಕು ಎನ್ನುವ ಕನಸಿದೆ ಆದರೂ ಸಧ್ಯ ವಿದ್ಯಾರ್ಥಿನಿಗೆ ತನ್ನ ಮುಂದಿನ ವಿದ್ಯಾಭ್ಯಾಸದ ಹೇಗೆ ಎನ್ನುವುದೇ ಅತ್ಯಂತ ದೊಡ್ಡ ಚಿಂತೆಯಾಗಿ ಕಾಡುತ್ತಿದೆ.
ಪ್ರತಿಭೆವುಳ್ಳ ಬಸವಜ್ಯೋತಿ ಬಾಬುಗೊಂಡ ಅವರಿಗೆ ಮುಂದಿನ ಶಿಕ್ಷಣ ಜೀವನಕ್ಕೆ ಸಹಾಯ ಮಾಡಲು ಇಚ್ಛಿಸುವವರು ಬಸವಜ್ಯೋತಿ ಬಾಬುಗೊಂಡ ಇವರ ಬ್ಯಾಂಕ್ ಖಾತೆ ಸಂಖ್ಯೆ – 62374226920
SBI AURAD. (ಎಸ್ಬಿಐ ಔರಾದ) IFSC CODE(ಐಎಫ್ಎಸ್ಸಿ ಕೋಡ್ – 0020240 ಹಣಕಾಸಿನ ನೇರವು ನೀಡಬಹುದು.ದೂರವಾಣಿ ಸಂಖ್ಯೆ 9353419036 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.