ಏ 06.ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಶರಣಬಸವ ಕಾನಿಹಾಳ ಅವರ ಹುಟ್ಟು ಹಬ್ಬದ ಅಂಗವಾಗಿ 101 ಸಸಿಗಳ ವಿತರಣೆ ಮತ್ತು ನೋಟ್ ಬುಕ್ ಕಿಟ್ಟುಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ತಾಲೂಕ ಅದ್ಯಕ್ಷ ರಮೇಶ ಕುನ್ನಟಗಿ ಅವರು ಮಾತನಾಡಿ ಈ ಅಧುನಿಕ ದಿನಗಳಲ್ಲಿ ಶುದ್ಧಗಾಳಿ ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಹುಟ್ಟುಹಬ್ಬವನ್ನು ಒಂದೊಂದು ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಗಾಳಿಯನ್ನು ಹಣದಿಂದ ಖರೀದಿಸುವ ದಿನಗಳು ಸಮೀಪಿಸಬಹುದು ಎಂದು ಕಳವಳ ವ್ಯಕ್ತಪಡಿಸಿ ಇಂದು ಇದೇ ಊರಿನ ಯುವಕರಾದ ಶರಣಬಸವ ಅವರು ತಮ್ಮ ಹುಟ್ಟು ಹಬ್ಬವನ್ನು ಸರಕಾರಿ ಶಾಲಾ ಮಕ್ಕಳಿಗೆ ಓದುವ ಹವ್ಯಾಸ ಮೂಡಿಸುವ ಕಿಟ್ಟುಗಳನ್ನು ಮತ್ತು ಒಂದೊಂದು ಸಸಿಗಳನ್ನು ವಿತರಿಸಿ ಆಚರಿಸಿಕೊಳ್ಳುವುದು ಸಮಾಜಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಯಮನಪ್ಪ ಮತ್ತು ಗ್ರಾಮಸ್ಥರಿಂದ ಶಾಲೆಗೆ ಟೇಬಲ್ ಮತ್ತು ಇತರ ಸಾಮಾಗ್ರಿಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರೂವಾರಿಗಳಾದ ಮಹಾಂತೇಶ ರೌಡಕುಂದ SDMC ಅದ್ಯಕ್ಷರು ಬಸವರಾಜ, ಶಾಲೆಯ ಮುಖ್ಯಗುರುಗಳಾದ ಕೃಷ್ಣಚಾರ್ಯ ವನಸಿರಿ ಫೌಂಡೇಶನ್ ಸದಸ್ಯರಾದ ಮಹಾಂತೇಶ ರೌಡಕುಂದ ಊರಿನ ಹಿರಿಯರು ಯಮನಪ್ಪ, ಹುಚ್ಚಪ್ಪ, ಗಂಗಪ್ಪ,ಶರಣಪ್ಪ ಕುರಲಿ, ಬಡಿಯಪ್ಪ ಕುರಕುಂದಿ, ವನಸಿರಿ ಫೌಂಡೇಶನ್ ಸದಸ್ಯರಾದ ವೆಂಕನಗೌಡ,ಬಸವರಾಜ, ನಾಗರಾಜ ಉಪ್ಪಲದೊಡ್ಡಿ, ಮೈಹೆಬೂಬ್ ರಮೇಶ ನಾಗಲಾಪೂರ ಹಾಗೂ ಶಾಲೆಯ ಶಿಕ್ಷಕರು,SDMCಸದಸ್ಯರು, ಊರಿನ ಹಿರಿಯರು,ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.