ಮೇ.29 ರಾಯಚೂರು ಜಿಲ್ಲೆಯ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಏಳನೇ ಮೈಲು ಕ್ಯಾಂಪನಲ್ಲಿ ಸಂಭವಿಸಿದ ದೌರ್ಜನ್ಯದಲ್ಲಿ ಕೊಲೆಯಾದ ರುಕ್ಮಿಣಿ ಗಂಡ ಪಾಂಡಪ್ಪ ಇವರ ಮನೆಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ್ ಪೋತದಾರರವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ತುರ್ತಾಗಿ ಆಹಾರ ಧಾನ್ಯಗಳ ಕಿಟ್ಟನ್ನು ನೀಡಿದರು.
ದೌರ್ಜನ್ಯದಲ್ಲಿ ಮೃತಪಟ್ಟವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸಹಾಯ ಸೌಲಭ್ಯಗಳ ಕುರಿತು ಕುಟುಂಬದವರಿಗೆ ತಿಳಿ ಹೇಳಿದರು. ಶೀಘ್ರದಲ್ಲಿ ಪರಿಹಾರ ಧನ, ಕುಟುಂಬದ ಅರ್ಹ ಅವಲಂಬಿತರಿಗೆ ಪಿಂಚಣಿ ಮತ್ತು ನೌಕರಿ ವ್ಯವಸ್ಥೆಯನ್ನು ಅತ್ಯಂತ ಶೀಘ್ರದಲ್ಲಿ ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಂಧನೂರಿನ ಸಹಾಯಕ ನಿರ್ದೇಶಕರಾದ ವಿಜಯ ರವರು ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.