ಮೇ 31.ಸಿಂಧನೂರು 2023-24ನೇ ವರ್ಷದ ಶಾಲಾ ಶೈಕ್ಷಣಿಕ ಪ್ರಾರಂಭವನ್ನು ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರವನ್ನು ಶಾಲಾ SDMC ಹಾಗೂ ಶಿಕ್ಷಕ ವೃಂದದಿಂದ ವಿತರಿಸಲಾಯಿತು. SSLCಯಲ್ಲಿ ತಾಲೂಕಿಗೆ ಹೆಚ್ಚಿನ ಅಂಕಗಳನ್ನು ಗಳಿಸಿದ ಮಕ್ಕಳಿಗೆ ಶಾಲೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಎಸ್ ಡಿಎಂಸಿ ಸದಸ್ಯರಾದ, ಎಂ.ಗಂಗಾಧರ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿ ಮತ್ತು ಶೈಕ್ಷಣಿಕವಾಗಿ ಶಾರೀರಿಕವಾಗಿ, ಭೌದ್ಧಿಕವಾಗಿ ಸಬಲೀಕರಣಗೊಳಿಸಲು ಜೂನ್ 9-2023ರಂದು SDMC ಹಾಗೂ ಶಿಕ್ಷಕ ವೃಂದದವರನ್ನೊಳಗೊಂಡು ಸಭೆ ನಡೆಸಿಯಿಸಿ ಸುಧೀರ್ಘ ಚರ್ಚೆ ಮಾಡುವುದರ ಮೂಲಕ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಮುಂದಾಗೋಣ. ಶಿಕ್ಷಕರ ಕೊರತೆ, ಕುಡಿಯುವ ನೀರು, ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶ್ರಮ ಹಾಕೋಣ. ಮತ್ತು ವಿದ್ಯಾರ್ಥಿಗಳು ಚೆನ್ನಾಗಿ ಓದುವುದರ ಜೊತೆಗೆ ಶಾಲೆಗೆ ಮತ್ತು ಪಾಲಕರಿಗೆ ಕೀರ್ತಿ ತರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ, ನೀಲಮ್ಮ ಅಲಬನೂರು ಮತ್ತು ಸದಸ್ಯರಾದ, ಮಂಜುನಾಥ, ಅರ್ಶದ್, ಅವರು ಶಾಲೆಯ ಅಭಿವೃದ್ಧಿ ಕುರಿತಾಗಿ ಎಲ್ಲರೂ ಕೈಜೋಡಿಸೋಣ. ಮಾದರಿ ಶಾಲೆಯನ್ನಾಗಿ ಮಾಡೋಣವೆಂದು ಮಾತನಾಡಿದರು. ಶಾಲೆಯ ಶಿಕ್ಷಕರಾದ, ಮಲ್ಲಪ್ಪ ಅವರು ಮಾತನಾಡಿ, ಶಾಲೆಯ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಶಾಲಾ ಮೇಲುಸ್ತುವಾರಿ ಸಮಿತಿ ಮುತುವರ್ಜಿ ವಹಿಸಬೇಕೆಂದು ಹೇಳಿದರು.
ಶಾಲೆಯ ಮುಖ್ಯ ಗುರುಗಳಾದ, ಜಂಬಣ್ಣ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಭೀಮರೆಡ್ಡಿ ಶಿಕ್ಷಕರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿಕ್ಷಕೀಯರಾದ, ಶ್ವೇತಾ, ಗಾಯಿತ್ರಿ, ಶ್ರೀದೇವಿ, ಹಾಗೂ ಶಿಕ್ಷಕರಾದ, ಜಡೇಶ, ಮೌನೇಶ, ಉಮೇಶ ಹಾಗೂ ಪಾಲಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನೀಯರು ಪಾಲ್ಗೊಂಡಿದ್ದರು.