ಮಾರ್ಚ್-ಎಪ್ರಿಲ್ 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದನ್ನು 25-03-2024 ರಿಂದ 06-04-2024ರ ವರೆಗೆ ನಡೆಸಲಾಯಿತು, ಎಲ್ಲಾ ವಿಷಯಗಳು ಉತ್ತರ ಪತ್ರಿಕೆಗಳು ಮೌಲ್ಯಮಾಪನ ಕಾರ್ಯ ಮುಕ್ತಾಯವಾಗಿದೆ, ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಒಂದರ ಫಲಿತಾಂಶ ಪ್ರಕಟಿಸುವ ಸಂಬಂಧ ನಾಳೆ ಅಂದರೆ ( 09-5-2024) ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಕರ್ನಾಟಕ ಶಾಲಾ ಪರಿಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಮಾಧ್ಯಮ ಘೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದ್ದಾರೆ.
ಪಾಲಕರೆ ಹಾಗೂ ವಿದ್ಯಾರ್ಥಿಗಳೆ ಫಲಿತಾಂಶ ನೋಡುವುದು ಹೇಗೆ ಗೊತ್ತಾ….?ಕರ್ನಾಟಕ ಶಾಲಾ ಪರೀಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಸೂಚನೆಯಂತೆ ಫಲಿತಾಂಶವನ್ನು 9 ರಂದು ಬೆಳಿಗ್ಗೆ 10.30 ಕ್ಕೆ ಪತ್ರಿಕೆ ಘೋಷಣೆಯ ಮೂಲಕ ಪ್ರಕಟಿಸಲಾಗುವುದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು KSEAB ಕರ್ನಾಟಕ ಎಸ್.ಎಸ್.ಎಲ್.ಸಿ ಫಲಿತಾಂಶಗಳು 2024ನ್ನು ಅಧಿಕೃತ ವೆಬ್ಸೈಟ್, ನಲ್ಲಿ ಪರಿಶೀಲಿಸಲು ಮತ್ತು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ ಕರ್ನಾಟಕ ಎಸ್,ಎಸ್,ಎಲ್,ಸಿ ಫಲಿತಾಂಶ 2024 ಡೌನ್ಲೋಡ್ ಮಾಡುವುದು ಹೇಗೆ ಎಂಬುದನ್ನು ಒಮ್ಮೆ ನೋಡಿ.
1) https://kseab.karnataka.gov.in ಮತ್ತು https://karresults.nic.in ಅಧಿಕೃತ ವೆಬ್ಸೈಟಗಳಿಗೆ ಹೋಗಿ
2) ಮುಖ್ಯ ಪುಟದಲ್ಲಿ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2024 ನ್ನು ಡೌನ್ಲೋಡ್ ಮಾಡಲು ಲಿಂಕ್ ಕ್ಲಿಕ್ ಮಾಡಿ
3) ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
4) “SUBMIT” ಬಟನ್ ಅನ್ನು ಕ್ಲಿಕ್ ಮಾಡಿ
5) ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2024ನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ
6) ಹೆಚ್ಚಿನ ರೆಫ್ರೆನ್ಸ್ ಗಾಗಿ ಫಲಿತಾಂಶ ಡೌನ್ಲೋಡ್ ಮಾಡಿ ಅಥವಾ ಪ್ರಿಂಟರ್ ತೆಗೆದುಕೊಳ್ಳಿ
ವಿದ್ಯಾರ್ಥಿಗಳಿಗೆ ಶುಭವಾಗಲಿ
2023-24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ ಬಡವರ ಬಾರು ಕೋಲು ಪತ್ರಿಕೆಯ ಆಶಯ ಮತ್ತು ನಮ್ಮ ಒಂದು ವಿನಂತಿ ಯಾವುದೇ ವಿದ್ಯಾರ್ಥಿ ಕಡಿಮೆ ಅಂಕಗಳನ್ನು ಪಡೆದುಕೊಂಡರೆ ಆತಂಕವಾಗಬೇಡಿ ಹೆದರಬೇಡಿ. ಹತಾಸರಾಗಬಾರದು. ನಿಮಗೆ ಶುಭ ಸುದ್ದಿ ಏನೆಂದರೆ ಈ ಬಾರಿ ನೀವು ಮೂರು ಬಾರಿ ಪರೀಕ್ಷೆ ಬರೆಯಬಹುದು. ಅದರಲ್ಲಿ ಹೆಚ್ಚು ಅಂಕಗಳು ಬಂದ ರಿಸಲ್ಟ್ ಅನ್ನು ಆಯ್ಕೆ ಮಾಡಬಹುದು. ಯಾವುದೇ ಪರೀಕ್ಷೆಯ ಅಂಕಪಟ್ಟಿಯಲ್ಲಿ ಪೂರಕ ಪರೀಕ್ಷೆ ಎಂದು ನಮೂದು ಆಗುವುದಿಲ್ಲ. ನೀವು ಫ್ರೆಶರ್ ಎಂದೇ ಅಂಕಪಟ್ಟಿಯಲ್ಲಿ ನಮೂದಾಗಲಿದೆ. ಅನುತ್ತೀರ್ಣರಾದಲ್ಲಿ, ಕಡಿಮೆ ಅಂಕ ಬಂದಲ್ಲಿ ಮತ್ತೆ ಇನ್ನೆರಡು ಪರೀಕ್ಷೆ ಬರೆಯಲು ಅವಕಾಶ ಇದೆ ಎಂಬುದನ್ನು ಮರೆಯಬೇಡಿ. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ನೆನಪಿಸಿಕೊಳ್ಳಿ.