ಏಪ್ರಿಲ್ 27.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚುನಾವಣೆ ಪ್ರಚಾರಕ್ಕಾಗಿ ಈ ಕರ ಪತ್ರವನ್ನು ಮಾಡಿಸಲಾಗಿತ್ತು ಆದರೆ ಈ ಕರಪತ್ರವನ್ನು ನೋಡಿದ ತಕ್ಷಣ ಯಾಕೆ ಈ ಫೋಟೋವನ್ನು ಮರೆಮಾಚಿದ್ದಾರೆ (ಸೀಲ್ ಹಾಕಿದ್ದಾರೆ) ಅದು ಯಾರಾಗಿರಬಹುದು ಎಂದು ಎಲ್ಲರಿಗೂ ಕೂಡ ಅನುಮಾನ ಬರುತ್ತದೆ ಅದರ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.
ಈ ಫೋಟೋದಲ್ಲಿ ಇರುವುದು ಬೇರೆ ಯಾರು ಅಲ್ಲ ಕಾಂಗ್ರೆಸ್ ಪಕ್ಷದ ಮಾಜಿ ರಾಯಚೂರು ಜಿಲ್ಲಾಧ್ಯಕ್ಷರಾದ ಬಿ ವಿ ನಾಯಕ್ ಹಲವು ವರ್ಷಗಳಿಂದ ಕೂಡ ಕಾಂಗ್ರೆಸ್ ಪಕ್ಷದ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಈ ಬಾರಿ ತಮಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಬಿ ವಿ ನಾಯಕ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬೇರೆಯವರಿಗೆ ಟಿಕೆಟ್ ನೀಡುವುದರ ಮೂಲಕ ಶಾಕ್ ನೀಡಿದೆ.
ಆದರೆ ಕೆಲವೇ ಕೆಲವು ದಿನಗಳ ಹಿಂದೆ ಬಿ ವಿ ನಾಯಕ್ ಮಾತ್ರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡು ಮಾನವೀಯ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ
ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡಿರುವ ಮಾಜಿ ರಾಯಚೂರು ಕಾಂಗ್ರೆಸ್ ಅಧ್ಯಕ್ಷರ ಫೋಟೋ ಮೇಲುಗಡೆ ಮರೆಮಾಚಿದ್ದಾರೆ (ಸೀಲ್ ಹಾಕಿದ್ದಾರೆ)