ರಾಯಚೂರು,ಏ.01,(ಕ.ವಾ):-ಉಚ್ಛ ನ್ಯಾಯಾಲಯದಲ್ಲಿ ದಖಲಾಗಿರುವ ರಿಟ್ ಅರ್ಜಿ ಸಂಖ್ಯೆ 15165/2018 ಮತ್ತು ನ್ಯಾಯಾಂಗ ನಿಂದನಾ ದಾವೆ ಸಂಖ್ಯೆ 343/2020 ರಲ್ಲಿ ಹೊರಡಿಸಲಾಗಿರುವ ಆದೇಶ ಹಾಗೂ ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದಂತೆ ರಾಯಚೂರು ಜಿಲ್ಲೆಯಲ್ಲಿ ಪ್ರತಿ ನಗರ ಹಾಗೂ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದೇ ಇರುವ ಹಾಗೂ ಸ್ಮಶಾನ ಭೂಮಿ ಅಗತ್ಯವಿರುವ ಪ್ರದೆಶಗಳಲ್ಲಿ ಸ್ಮಶಾನ ಭೂಮಿ ಒದಗಿಸಲು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಮದು ವೇಲೆ ಸಾರ್ವಜನಿಕ ಸ್ಮಶಾನ ಇಲ್ಲದೇ ಇದ್ದ ಪಕ್ಷದಲ್ಲಿ ತಮ್ಮ ನಗರ ಹಾಗೂ ಗ್ರಾಮಗಳಿಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸಂಬಂಧಿಸಿದ ತಹಸಿಲ್ದಾರರುಗಳ ಮೂಲಕ ಸಲ್ಲಿಸಲು ತಿಳಿಯಪಡಿಸಿದೆ ಹಾಗೂ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲಿ ್ಲಸಂಬಂಧಿಸಿದ ದಾಖಲೆಗಳೊಂದಿಗೆ ದೂರು ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.