ರಾಯಚೂರು,ಮೇ.೨೭ ಮಳೆ-ಗಾಳಿ ಹಾಗೂ ಸಿಡಿಲು-ಮಿಂಚಿನಿಂದ ತಪ್ಪಿಸಿಕೊಳ್ಳಲು ಜನಸಾಮನ್ಯರು ಕೆಎಸ್ಎನ್ಡಿಎಂಸಿ (KSNDMC) ಯಲ್ಲಿ ಚಾಲ್ತಿಯಲ್ಲಿರುವ ವರುಣ ಮಿತ್ರ ಸಹಾಯವಾಣ ೯೨೪೩೩೪೫೪೩೩ ಕ್ಕೆ ಸಂಪರ್ಕಿಸಿ ಹವಾಮಾನ ಮಾಹಿತಿ ಪಡೆಯುವುದು ಹಾಗೂ ಗುಡುಗು ಸಿಡಿಲಿನ ಮುನ್ನೆಚ್ಚರಿಕೆಗಳನ್ನು ಕೆಎಸ್ಎನ್ಡಿಎಂಸಿ (KSNDMC) ಅಭಿವೃದ್ಧಿಪಡಿಸಿರುವ SIDILU Appa ನಲ್ಲಿ ಪಡೆಯಬಹುದು ಅಥವಾ MDMA ಅಭಿವೃದ್ಧಿಪಡಿಸಿರುವ Damini App ಡೌನಲೋಡ್ ಮಾಡಿಕೊಳ್ಳಬಹುದು.
ಇದರಲ್ಲಿ ಸಿಡಿಲು ಯಾವ ಪ್ರದೇಶದಲ್ಲಿ ಬರುವ ಸಾಧ್ಯತೆವಿರುತ್ತದೆ ಎಂಬುದರ ಕುರಿತು ೩೦ ನಿಮಿಷಗಳ ಮೊದಲೇ ಮುನ್ಸೂಚನೆ ಹಾಗೂ ಸಿಡಿಲಿನ ಅಪಾಯಗಳನ್ನು ತಗ್ಗಿಸಲು ಕೈಗೊಳ್ಳಬೇಕಾದ ಸಲಹೆ/ಸೂಚನೆಗಳನ್ನು ನೀಡುತ್ತದೆ. ಹವಾಮಾನ ವಿಷಯದಲ್ಲಿ ಮಾಹಿತಿ ಮತ್ತು ಅಲರ್ಟ್ ಪಡೆಯಲು NDMA ಅಭಿವೃದ್ಧಿಪಡಿಸಿರುವ Sachet Appa ನಲ್ಲಿ ಸಹ ಪಡೆಯಬಹುದಾಗಿದೆ. ಈ ಅವಶ್ಯಕ ಆ್ಯಪ್ಗಳಿಂದ ಜಿಲ್ಲೆಯಲ್ಲಿ ಜೀವಹಾನಿ, ಜಾನುವಾರುಗಳ ಹಾನಿಯಾನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಯಚೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.