ಸಿಂಧನೂರು ಜುಲೈ 23.ತಾಲೂಕಿನ ಮಾಡಶಿರುವಾರ ಗ್ರಾಮದಲ್ಲಿ ನಡೆದ ಎರಡನೇ ದಿನದ ಎನ್ ಎಸ್ ಎಸ್ ವಾರ್ಷಿಕ ಶಿಬಿರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದೇಯೋದ್ದೇಶ ಗಳು , ಮತ್ತು ನಾಯಕತ್ವದ ಗುಣಗಳು ಈ ವಿಷಯದ ಕುರಿತು ಉಪನ್ಯಾಸ ನೀಡಿದ ಡಾ. ಮಲ್ಲಿಕಾರ್ಜುನ್ ಕಮತಗಿ ಅವರು ಮಾತನಾಡುತ್ತಾ ,ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲಿ ಬೌದ್ಧಿಕ ಜ್ಞಾನ ಎಷ್ಟು ಮುಖ್ಯವೋ ಅಷ್ಟೇ ಬಟ್ಟೆ ತರ ಚಟುವಟಿಕೆಯು ಅಷ್ಟೇ ಮುಖ್ಯ ಹಾಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ,ಸಮಯಪ್ರಜ್ಞೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು ಅಲ್ಲದೆ ತಮ್ಮ ವ್ಯಕ್ತಿತ್ವ ವಿಕಾಸನಕ್ಕೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಎನ್ ಎಸ್ ಎಸ್ ಫಲಕಾರಿಯಾಗಿದೆ ಎಂದರು.
ಈ ಎರಡನೇ ದಿನದ ಸಾಯಂಕಾಲದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯರಾದ ಶ್ರೀ ವೀರೇಶ ಸಾಲಿಮಠ ಎಚ್ ಎಮ್ ಇವರು ಎನ್ ಎಸ್ ಎಸ್ ವಿದ್ಯಾರ್ಥಿಗಳ ಶ್ರಮದಾನ ಕಾರ್ಯಕ್ರಮವನ್ನು ಗಮನಿಸಿ ಯಥಾ ರಾಜ ತಥಾ ಪ್ರಜಾ ಎಂದು ಕಾಲೇಜಿನ ಉಪನ್ಯಾಸಕರನ್ನು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ ಉಪನ್ಯಾಸಕರಾದ ಜಗದೀಶ್ ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಗ್ರಾಮದ ನರಸಿಂಹ ದಾಸರ, ನರಸಪ್ಪ ಕೆಎಸ್ಆರ್ಟಿಸಿ, ಉಪನ್ಯಾಸಕರಾದ ಶಿವಕುಮಾರ ಗಣಕಯಂತ್ರ ಉಪನ್ಯಾಸಕರು, ಜ್ಯೋತಿ ಕನ್ನಡ ಉಪನ್ಯಾಸಕಿ, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಭಗತ್ ಸಿಂಗ್ ತಂಡದವರು ನಿರ್ವಹಿಸಿದರು. ನಂತರ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಜನರ ಮನಸ್ಸು ಗೆದ್ದವು.