ಅಗಸ್ಟ್ 24.ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ದಿನಾಂಕ 23.08.2023 ರಂದು ನಡೆದ ನೊಬೆಲ್ ಪದವಿ ಮಹಾವಿದ್ಯಾಲಯದ 2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಯ ಉದ್ಘಾಟನಾ ಸಮಾರಂಭ
ಕಾರ್ಯಕ್ರಮದ ಸಾನಿದ್ಯ ವಹಿಸಿದ ಪರಮಪೂಜ್ಯ ಡಾ.ಸಿದ್ದರಾಮೇಶ್ವರ ಶರಣರು ಮತಾನಾಡುತ್ತಾ, ಸಮಾಜದ ಸೇವೆಗಾಗಿ ಬಂದ ಶಿಬಿರಾರ್ಥಿಗಳು ಹೃದಯ ವೈಶಾಲತೆಯಿಂದ ಗ್ರಾಮದ ಸೇವೆಗೆ ತಮ್ಮನ್ನು ತಾವೂ ಸಮರ್ಪಿಸಿಕೊಂಡು ಆ ಮೂಲಕ , ಸದೃಢ ದೇಶವನ್ನು ಮುನ್ನಡೆಸಲು ಎನ್ ಎಸ್ ಎಸ್ ಶಿಬಿರಾರ್ಥಿಗಳು ಕಂಕಣ ಬದ್ದರಾಗಿ,ಶಿಕ್ಷಣಕಿಂತ ಸಂಸ್ಕಾರ ದೊಡ್ಡದು ಆ ಮೂಲಕ ಜ್ಞಾನವಂತರಾಗಿ ಈ ಹಿಂದೆ ಕಟ್ಟಿದ ಈ ದೇಶವನ್ನು ಉಳಿಸಿಕೊಂಡು ಹೋಗುವ ಬಹು ದೊಡ್ಡ ಜವಬ್ದಾರಿ, ಈ ದೇಶದ ಯುವಕರ ಮೇಲಿದೆ. ಅಷ್ಟೇ ಅಲ್ಲ ದೇಶಕ್ಕಾಗಿ ನಿಸ್ವರ್ಥ ಶ್ರಮಧಾನ ಮಾಡುಬೇಕು.ಎಂದು ಕರೆ ನೀಡಿದರು.
ಹಾಗೆಯೇ, ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಶರಣಪ್ಪ ನೆಟೆಕಲ್ ನಿವೃತ್ತ ಉಪನ್ಯಾಸಕರು ಮಾತಾನಾಡುತ್ತಾ.ಶಿಬಿರಾರ್ಥಿಗಳು ಪಾದರಸದಂತೆ ಚಲನಶಿಲವಾಗಿ ,ತ್ಯಾಗ ಶ್ರದ್ಧೆ ಇಟ್ಟುಕೊಂಡು ಗ್ರಾಮಗಳ ಉದ್ದರಾಕ್ಕಾಗಿ ಸೇವಾ ಮನೋಭಾವ ಬೇಳಸಿಕೊಂಡು ವ್ಯಕ್ತಿತ್ವ ವಿಕಸನ ರೂಪಿಸಿಕೊಳ್ಳಲು ಸಹಾಯಕವಾಗಿರುತ್ತವೆ.ಎಂದು ಶರಣಪ್ಪ ನಿವೃತ್ತ ಉಪನ್ಯಾಸಕರು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ.ಶರಣಪ್ಪ ವೈದ್ಯರು ಮಾತಾನಾಡುತ್ತಾ,
ದೇಶ ಸೇವೆಗಾಗಿ ಕಂಕಣಬದ್ದರಾಗಿ ಎಂದು ಕರೆನೀಡುತ್ತಾ,ಯುವಕರು ದುಶ್ಚಟಗಳಿಂದ ದೂರ ಇದ್ದು ದೇಶ ಸೇವಾ ಮನೋಭಾವದ ಜೊತೆಗೆ ದೃಡ ಮನಸ್ಸುನ್ನೊಂದಿಗೆ ಮಾಡಿಕೊಳ್ಳಲು ಈ ಎನ್ ಎಸ್ ಎಸ್ ಶಿಬಿರಾರ್ಥಿಗಳಿಗೆ
ನೈತಿಕತೆ ಸಮಾಜದ ಬಗೆಗಿನ ಕಳಕಳಿ ಜೊತೆಗೆ ಸಾಮನ್ಯ ಜ್ಞಾನ ಇರಬೇಕೆಂದರು.
ದೊಡ್ಡ ಭೀಮನಗೌಡ ಊರಿನ ಹಿರಿಯ ಮುಖಂಡರು ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ನೊಬೆಲ್ ಪದವಿ ಮಹಾವಿದ್ಯಾಲದ ಅಧ್ಯಕ್ಷರಾದ ಪರಶುರಾಮ ಮಲ್ಲಾಪುರ ಮಾತಾನಾಡುತ್ತಾ,ಶಿಬಿರಾರ್ಥಿಳು ಗ್ರಾಮ ಉದ್ಧಾರಕ್ಕಾಗಿ ಶ್ರದ್ದೆಯಿಂದ ಸೇವಾ ಮನೋ ಇಚ್ಚಾಶಕ್ತಿ ಇದೆ ಮಕ್ಕಳ ಪ್ರತಿಭಾ ಅನಾವರಣ ಸೂಕ್ತ ವೇದಿಕೆ ಆಗಿದೆ. ಈ ಸಂದರ್ಭದಲ್ಲಿ ಯಶಸ್ವಿ ಚಂದ್ರಯಾನ ಸಂಭ್ರಮಿಸಿದರು.
ಸಂದರ್ಭದಲ್ಲಿ ಡಾ.ಅರುಣಕುಮಾರ ಬೇರ್ಗಿ ಪ್ರಾಸ್ತಾವಿಕ ಮಾತನಾಡಿದರು ,ಬಡವರ ಬಾರಕೋಲ ಪಾಕ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕರಾದ S.S ಜೀನೂರು, V9 ವರದಿಗಾರರಾದ ಅಂಬಣ್ಣ , ಹಾಗೂ ಉಪನ್ಯಾಸಕಿ ಶ್ರೀಮತಿ ಐಶ್ವರ್ಯ ವೇದಿಕೆಯಲ್ಲಿ ಇದ್ದರು.ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಆನಂದ ದುಮತಿ ಉಪನ್ಯಾಸಕರಾದ ಜಯಪ್ಪ ಗೊರೇಬಾಳ, ಶಂಕರಪ್ಪ ಪತ್ತಾರ ರವಿ ಮಲ್ಲಾಪುರ, ಮಲ್ಲಿಕಾರ್ಜುನ ಕಮತಿಗಿ, ಶಿವರಾಜ ಜಾಲವಾಡಗಿ, ಹನುಮೇಶ ಗುಡದೂರು, ವೆಂಕೋಬ,ಹನುಮಂತ ರಡ್ಡಿ, ಶಾಂತ ಪಾಟಿಲ್ , ಜ್ಯೋತಿ ಸುಕಲಾಪೇಟೆ, ಶ್ರೀಮತಿ ಗೀರೀಜಾ,ಸಮ್ರೀನ್, ಜಿನತ್, ಸಣ್ಣ ಯಲ್ಲಪ್ಪ ಗಿರಿಣಿ ,ವಿಶ್ವನಾಥ, ನಾಗರಾಜ ನಾಯಕ ಸೋನಮಗೌಡ, ಪ್ರಾಂಶುಪಾಲರು ಆನಂದ ಎಸ್ ದುಮತಿ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಹೊನ್ನಪ್ಪ ಬೆಳಗುರ್ಕಿ.ದೇವರಾಜ ಇನ್ನಿತರರು ಉಪಸ್ಥಿತಿ ಇದ್ದರು .ಶ್ರೀಮತಿ ಚನ್ನಬಸಮ್ಮ ನಿರೂಪಿಸಿದರು. ಶ್ರೀಮತಿ ಐಶ್ವರ್ಯ ವಂದಿಸಿದರು.