ಸಿಂಧನೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ದುಗ್ಗಮ್ಮನಗುಂಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ದುಗ್ಗಮ್ಮನಗುಂಡ ಶಾಲೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಗೆ ಆಯ್ಕೆ ಯಾಗಿದೆ.
2007 ರಲ್ಲಿ ಪ್ರಾರಂಭವಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಲವಾರು ಶೈಕ್ಷಣಿಕ ಪ್ರಯೋಗಾತ್ಮಕ ಚಟುವಟಿಕೆಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಶಾಲಾ ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರು, ವಿರುಪಾಕ್ಷಪ್ಪ ಫಕಿರಪೂರ ಹಾಗೂ ಗ್ರಾಮದ ಗ್ರಾಮಸ್ಥರ ಸಹಕಾರದಿಂದ ಶಾಲೆಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ.
ಶಾಲೆಯಲ್ಲಿ 150ಕ್ಕೂ ಹೆಚ್ಚಿನ ವಿವಿಧ ರೀತಿಯ ಗಿಡಗಳಿವೆ. ಸುಂದರವಾದ ಕೈತೋಟವಿದೆ. ವಿವಿಧ ಭಾಷಾ ಸಂಘಗಳ ಸಹಾಯದಿಂದ ಭಾಷಾ ಚಟುವಟಿಕೆಗಳು ನಡೆಯುತ್ತಿದ್ದು ಕನ್ನಡ ಕಂಪು ಮತ್ತು ಹಸಿರೇ ನಮ್ಮ ಉಸಿರು ಎಂಬ ಎರಡು ಗೋಡೆ ಬರಹ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಪ್ರಕಟಿಸುತ್ತಿದ್ದಾರೆ. ಶ್ರೀ ಚಿಕ್ಕಯ್ಯ ಪಂಡಿತ್ ಕಬ್ ಘಟಕದಿಂದ ಹಲವಾರು ಪರಿಸರ ಜಾಗೃತಿ, ಕಾರ್ಯಕ್ರಮಗಳನ್ನು, ಪರಿಸರ ಸ್ನೇಹಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಜಾಗೃತಿ ಜಾಥಾ, ಪರಿಸರ ಸ್ನೇಹಿ ದೀಪಾವಳಿ ಆಚರಣೆ, ಬೀಜದುಂಡೆ ತಯಾರಿ, ಪರಿಸರ ದಿನಾಚರಣೆ ಸೇರಿದಂತೆ ಪರಿಸರ ಸಂರಕ್ಷಣೆಯ ಕುರಿತಾದ ಹಲವಾರು ಕಾರ್ಯಚಟುವಟಿಕೆಗಳನ್ನು ವಿದ್ಯಾರ್ಥಿಗಳ ಮೂಲಕ ಸಮುದಾಯದ ಸಹಕಾರದೊಂದಿಗೆ ಶಾಲೆಯಲ್ಲಿ ನಡೆಸಿಕೊಂಡು ಬಂದಿದ್ದಾರೆ. India book of records ನಲ್ಲಿ ಸೇಪ೯ಡೆಯಾದ ವಿದ್ಯಾಗಮ ಕಿರು ಚಿತ್ರದಲ್ಲಿ ಶಾಲಾ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.
ಕಳೆದ ವಾರ ಟ್ರಸ್ಟ್ ಸದಸ್ಯರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪ್ರತಿವಷ೯ ವಿದ್ಯಾರ್ಥಿಗಳು ಹಸ್ತಪ್ರತಿಯ ತಯಾರಿ ಮಾಡಿದ್ದಾರೆ.ಶಾಲೆಯಲ್ಲಿ ಸುಸಜ್ಜಿತವಾದ ನಲಿಕಲಿ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್ ಇದ್ದು ತಂತ್ರಜ್ಞಾನದ ಮೂಲಕ ಬೋಧನೆಯನ್ನು ಶಾಲೆಯಲ್ಲಿ ಮಾಡುತ್ತಿದ್ದಾರೆ. ವಿಶಾಲವಾದ ಆಟದ ಮೈದಾನ ಇದ್ದು ಸ್ವಚ್ಛತೆಯಿಂದ ಕೂಡಿದೆ. ವಿದ್ಯಾರ್ಥಿಗಳು ಶಿಸ್ತಿನಿಂದ ಇದ್ದು ಶಾಲಾ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ. 22 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ದುಗ್ಗಮ್ಮನಗುಂಡ ಶಾಲೆಯನ್ನು ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ . ಪ್ರಶಸ್ತಿಯನ್ನು ಜುಲೈ 27 ,2024ರಂದು ಶ್ರೀ ಸತ್ಯ ಸಾಯಿ ಗ್ರಾಮ ಮುದೇನಹಳ್ಳಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ಹಾಗೂ ಪ್ರಶಸ್ತಿ ಪತ್ರ ವನ್ನು ಒಳಗೊಂಡಿರುತ್ತದೆ ಎಂದು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಚಿಕ್ಕಬಳ್ಳಾಪುರ ಟ್ರಸ್ಟಿ ಅವರು ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರು ಟ್ರಸ್ಟ್ ನ ಆಯ್ಕೆ ಸಮಿತಿ ಅವರಿಗೆ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಗ್ರಾಮದ ಗ್ರಾಮಸ್ಥರು ಹಾಗೂ ದಾನಿಗಳಿಗೆ , ಪಾಲಕರಿಗೆ ಧನ್ಯವಾದ ತಿಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿ ಕಳೆದ ವರ್ಷ ರಾಜ್ಯಪಾಲ ಪುರಸ್ಕಾರ ಪಡೆಯುವ ಮೂಲಕ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದ. ಶಾಲೆಯು ಸುಂದರವಾದ ಹಸಿರು ಪರಿಸರವನ್ನು ಹಾಗೂ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗಲು ಮುಖ್ಯ ಗುರುಗಳಾದ ಶಂಕರ ದೇವರು ಹಿರೇಮಠ ಅವರ ಶ್ರಮ ಬಹಳಷ್ಟು ಬಹಳಷ್ಟಿದೆ.ಸಹ ಶಿಕ್ಷಕರಾದ ವಿರುಪಾಕ್ಷಪ್ಪ ಫಕಿರಪೂರ ಹಾಗೂ ಪ್ರದೀಪ್ ಕುಮಾರ್ ಅವರ ಚಟುವಟಿಕೆ ಆಧಾರಿತ ಬೋಧನೆ ಪರಿಣಾಮಕಾರಿಯಾಗಿದೆ. ರಾಜ್ಯಮಟ್ಟದ ಪುರಸ್ಕಾರ ನಮ್ಮ ಶಾಲೆಗೆ ಬಂದಿದ್ದು ಸಂತಸ ತಂದಿದೆ ಎಂದು
ಎಸ್ .ಡಿ .ಎಮ್. ಸಿ ಅಧ್ಯಕ್ಷರಾದ ಗುಡದಪ್ಪ, ಎಸ್. ಡಿ .ಎಮ್. ಸಿ, ಮಾಜಿ ಅಧ್ಯಕ್ಷರಾದ ಲಕ್ಷ್ಮಣ, ಗ್ರಾಮದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸಿಂಧನೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸಲಿಂಗಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಸಾಬಣ್ಣ ವಗ್ಗರ್,ಗಿರೀಶ್ ಸಮೂಹ ಸಂಪನ್ಮೂಲ ವ್ಯಕ್ತಿ ದೇವಿ ಕ್ಯಾಂಪ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಿಂಧನೂರು ಪದಾಧಿಕಾರಿಗಳು,ಶಿಕ್ಷಕರ ಬಳಗ ಹಾಗೂ ಸರಕಾರಿ ನೌಕರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.