ರಾಯಚೂರ್ ಜು10. ಕರ್ನಾಟಕ ಯುವ ರಕ್ಷಣಾ ವೇದಿಕೆ ಮಸ್ಕಿ ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾ ಉಸ್ತಾವರಿ ಬಸವರಾಜ ಬಂಡ್ಲಿ ಅವರು ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೊಷ್ಟಿಯಲ್ಲಿ ಮತನಾಡಿದ ಅವರು, ನಾಡಿನ ನುಡಿ, ನೆಲ,ಜಲ ಸಂಸ್ಕೃತಿ ಹಾಗೂ ಕಾರ್ಮಿಕ ರಕ್ಷಣೆಗಾಗಿ ಶ್ರಮಿಸಲು ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ನೂತನ ಸಂಘ ರಚಿಸಲಾಗಿದ್ದು, ಮಸ್ಕಿ ತಾಲೂಕಿನ ನೂತನ ಪದಾಧಿಕಾರಿಗಳು ಸಂಘಟನೆ ಬಲಪಡಿಸಲು ಶ್ರಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಸ್ಕಿ ತಾಲೂಕಿನ ನೂತನ ಅಧ್ಯಕ್ಷರಾದ ರವಿಚಂದ್ರ ಕಾರಭಾರಿ, ಉಪಾಧ್ಯಕ್ಷ ಮೋದಿನ ಮಸ್ಕಿ, ಉಪಾಧ್ಯಕ್ಷ ಅಮರೇಗೌಡ ಪಾಟೀಲ, ಉಪಾಧ್ಯಕ್ಷ ಮೌನೇಶ ಉಪ್ಪಾರ, ಉಪಾಧ್ಯಕ್ಷ ಹನುಮೇಶ ನಾಯಕ, ಮಾಳಿಂಗಪ್ಪ ಕನ್ನಾಳ ಕಾರ್ಯಾಧ್ಯಕ್ಷ, ಬಸವರಾಜ ಮಸ್ಕಿ ಪ್ರಧಾನ ಕಾರ್ಯದರ್ಶಿ, ರಾಮನಗೌಡ ಮಸ್ಕಿ ಸಂಘಟನಾ ಕಾರ್ಯದರ್ಶಿ, ಮಹೇಶ ಕಾರ್ಯದರ್ಶಿ, ಮಂಜುನಾಥ ವ್ಯಾಸನಂದಿಹಾಳ ಕಾರ್ಯದರ್ಶಿ, ತಿಮ್ಮಣ್ಣ ಕನ್ನಾಳ ಕಾರ್ಯದರ್ಶಿ, ಆಂಜನೇಯ ಮಸ್ಕಿ ಕಾರ್ಯದರ್ಶಿ, ಮಮ್ಮದ್ ರಫಿ ಸಹ ಕಾರ್ಯದರ್ಶಿ, ಅಮರೇಶ ಬುದ್ದಿನಿ ಸಹ ಕಾರ್ಯದರ್ಶಿ, ಶಿವಕುಮಾರ ಚವ್ಹಾಣ ಸಹ ಕಾರ್ಯದರ್ಶಿ ಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾನ್ವಿ ತಾಲೂಕ ಘಟಕ ಅಧ್ಯಕ್ಷ ಹುಸೇನಭಾಷಾ,ನಾಗಲಾಪೂರ ಕಾವ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯಂಕಣ್ಣ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಸದಸ್ಯರು ಉಪಸ್ಥಿರಿದ್ದರು.