ರಾಯಚೂರು,ಮಾ.31,(ಕ.ವಾ):- ಭಾರತ ಚುನಾವಣೆ ಆಯೋಗ ಮತ್ತು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರ ನಿರ್ದೇಶನದಂತೆ ತಾಲೂಕ ಚುನಾವಣೆ ಅಧಿಕಾರಿಗಳ ಕಾರ್ಯಾಲಯದಲ್ಲಿ 53-ರಾಯಚೂರು ಗ್ರಾಮೀಣ ಹಾಗೂ 54-ರಾಯಚೂರು ನಗರ ವಿಧಾನಸಾಭ ವ್ಯಾಪ್ತಿಗೆ ಬರುವ ಮತದಾರರು, ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ತಹಸೀಲ್ದಾರ್ ಕಾರ್ಯಾಲಯದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾದೆ, ದೂ.ಸಂ: 08532-200772 ಗೆ ಸಂಪರ್ಕಿಸಿ ಎಂದು ಸಹಾಯಕ ಆಯುಕ್ತರು ರಾಯಚೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.