ಬಡವರ ಬಾರುಕೋಲು ಸುದ್ದಿ
ಮಸ್ಕಿ : ಸಮೀಪದ ಉದ್ಬಾಳ (ಯು) ಗ್ರಾಮ ಪಂಚಾಯತಿಯ ಕಚೇರಿಗೆ ತಾಲೂಕು ಪಂಚಾಯತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ಅವರು ಶುಕ್ರವಾರ ಭೇಟಿ ನೀಡಿ ಗ್ರಾಂ.ಪಂಚಾಯತಿ ವತಿಯಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಡೆದಿರುವ ಕಾಮಗಾರಿಗಳ ಕಡತಗಳು,ಕುಡಿಯುವ ನೀರಿನ ನಿರ್ವಾಹಣೆಯ ಬಗ್ಗೆ,ಶುದ್ದ ಕುಡಿಯುವ ನೀರಿನ ಘಟಕಗಳು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತೀವೆ ಎನ್ನುವ ಕುರಿತು ಮಾಹಿತಿ ಪಡೆದುಕೊಂಡರು ಹಾಗೂ ಕರ ವಸೂಲಾತಿಯ ಕುರಿತು ಪರಿಶೀಲಿಸಿ ಪ್ರಗತಿ ಸಾಧಿಸಲು ಸೂಚಿಸಿದರು.
ಸನ್ಮಾನ ಮಾಡಿದ ಗ್ರಾಂ. ಪಂ.ಅಧ್ಯಕ್ಷರು:-
ಗ್ರಾಮ ಪಂಚಾಯತಿಯ ಕಚೇರಿಗೆ ಭೇಟಿ ನೀಡಿದ ಇ.ಒ ಅಮರೇಶ ಯಾದವ್ ಅವರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನೀಲಕಂಠಪ್ಪ ನಾಯಕ ರವರು ಗ್ರಾಮ ಪಂಚಾಯತಿಯ ಸಿಬ್ಬಂದಿಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿ ಸತ್ಕರಿಸಿದರು.
ನಂತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಕಾಮಗಾರಿಗಳ ಸ್ಥಳಗಳನ್ನು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಲು ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ವಾಸ್ತವ ಸ್ಥಿತಿಯನ್ನು ಮತ್ತು ಪಂಚಾಯತಿ ವತಿಯಿಂದ ಆಗಬೇಕಾಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.ಹಾಗೂ ಶಾಲೆಯಲ್ಲಿರುವ ಅಡುಗೆ ಕೋಣೆಯ ಕಾಮಗಾರಿಯ ಸ್ಥಳಕ್ಕೆ ಮತ್ತು ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೀಕ್ಷಿಸಿ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಕೆಲಸ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ
ಗ್ರಾಮ ಪಂಚಾಯತ್ ಅಧ್ಯಕ್ಷ ನೀಲಕಂಠಪ್ಪ ನಾಯಕ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಗುಡದೂರು,ಗ್ರೇಡ್ 2 ಕಾರ್ಯದರ್ಶಿ ತಿಮ್ಮಣ್ಣ ದಿದ್ದಿಗಿ,ದೊಡ್ಡಯ್ಯಸ್ವಾಮಿ, ಅಮರೇಶಗೌಡ,BFT ಭೀರಪ್ಪ ಕ್ಯಾತ್ನಟ್ಟಿ,ಅಯ್ಯಪ್ಪ,ರಂಗ ರಾವ್ ಕುಲಕರ್ಣಿ ಕ್ಯಾತ್ನಟ್ಟಿ ಹಾಗೂ ಇನ್ನಿತರರು ಇದ್ದರು.
ವರದಿ : ಎಚ್.ಕೆ.ಬಡಿಗೇರ್
ಸರ್ಕಾರಿ ವೈದ್ಯರ ವಿರುದ್ಧ ಉಗ್ರ ಪ್ರತಿಭಟ