ರಾಯಚೂರು ಆಗಸ್ಟ್ 06. ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ಸಿಂಧನೂರು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ ಪತಿ ಅವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ ಜಮೀನು ವಿಚಾರವಾಗಿ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ ಈ ವಿಚಾರವಾಗಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ದ್ರಾಕ್ಷಾಯಿಣಿ ಅವರು ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ.
ಹೌದು ಗೋಮರ್ಸಿ ಗ್ರಾಮದಲ್ಲಿ ಇಂದು ಹಲ್ಲೆ ನಡೆಸಿದ್ದಾರೆ ಒಳ್ಳೆಯ ಸ್ವಭಾವದ ಸಂಭಾವಿತ ನನ್ನ ಪತಿ ಶ್ರೀ ಬಸನಗೌಡ ವೀರನಗೌಡ ಮಾಲಿ ಪಾಟೀಲ್ ಗೋಮರ್ಸಿ ಇವರ ಮೇಲೆ ಕಾಂತೇಗೌಡ ಹಾಗೂ ಕಾಂತೇಗೌಡನ ಮಕ್ಕಳು ಕಾಂತೇಗೌಡನ ಮನೆ ಮಹಿಳೆಯರಿಂದ ಹಲ್ಲೆ ಮಾಡಿದ್ದಾರೆ ನಾವು ಇಲ್ಲಿಗೆ ಬಿಡುವುದಿಲ್ಲ ಇವರ ಮೇಲೆ ಪ್ರಕರಣ ದಾಖಲಿಸಿ, ಜೈಲು ಶಿಕ್ಷೆ ಹಾಗೊವರೆಗೂ ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಗೋಮರ್ಸಿ ಗ್ರಾಮದಲ್ಲಿ ಖಾಸಗಿ ಶಾಲೆಯನ್ನು ಅಧ್ಯಕ್ಷೆ ದ್ರಾಕ್ಷಾಯಿಣಿ ಪತಿ ಬಸನಗೌಡ ನಡೆಸುತ್ತಿದ್ದರು ಶಾಲೆ ಸುತ್ತಲೂ ಬೇಲಿ ಹಾಕಲು ಮುಂದಾಗಿದ್ದು ಬಸನಗೌಡರಿಗೆ ಕಾಂತೇಗೌಡ ಎಂಬಾತ ಬೇಲಿ ಹಾಕಲಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಈ ವಿಚಾರವಾಗಿ ಕಾಂತೇಗೌಡ ಮತ್ತು ಬಸನಗೌಡ ಅವರ ಮಧ್ಯೆ ವಾಗ್ವಾದ ಉಂಟಾಗಿದೆ ಬಳಿಕ ಮಾರಣಾಂತಿಕ ಹಲ್ಲಿಗೆ ಕಾಂತೇಗೌಡ ಮುಂದಾಗಿದ್ದಾರೆ ಹಲ್ಲೆಯಲ್ಲಿ ದ್ರಾಕ್ಷಾಯಿಣಿ ಪತಿ ಬಸನಗೌಡರಿಗೆ ಗಂಭೀರ ಗಾಯವಾಗಿದೆ ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.