ಮಸ್ಕಿ :
ಸಮೀಪದ ಉದ್ಬಾಳ(ಯು) ಗ್ರಾಮ ಪಂಚಾಯತಿಯಲ್ಲಿ ಈ ದಿನ ಸಾಮನ್ಯ ಸಭೆಯು ನಡೆಯಿತು.ಈ ಸಭೆಯ ಅಧ್ಯಕ್ಷತೆಯ ಸ್ಥಾನವನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನೀಲಕಂಠಪ್ಪ ನಾಯಕ ವಹಿಸಿಕೊಂಡಿದ್ದರು.ಈ ದಿನದ ಸಭೆಗೆ ಸರ್ವ ಸದಸ್ಯರನ್ನು
ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳಾದ ತಿಮ್ಮಣ್ಣ ದಿದ್ದಿಗಿ ಯವರು ಸ್ವಾಗತಿಸಿ ನಂತರ ಸಭೆಯಲ್ಲಿ ಸಭೆಯ ನಡಾವಳಿಗಳನ್ನು ಒದುವುದರ ಮೂಲಕ
ಸಭೆ ನಡೆಯುವುದಕ್ಕೆ ಅನುಕೂಲ ಮಾಡಿದರು.
ತದನಂತರ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬಸವರಾಜ ಗುಡದೂರು ಅವರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಕುರಿತು ಮಾಹಿತಿ ನೀಡಿ ಚರ್ಚಿಸುವುದಕ್ಕೆ ಅವಕಾಶವನ್ನು ನೀಡಿದರು.
ಈ ಚರ್ಚೆಯ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಸರ್ವರೂ ಈಗಾಗಲೇ ಅನುಮೋದನೆಯಾದ 15ನೇ ಹಣಕಾಸು,ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸುವುದು,ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಕುಡಿಯುವ ನೀರು,ವಿದ್ಯುತ್ ವ,ವಸತಿ ವ್ಯವಸ್ಥೆ ಕಲ್ಪಿಸಿಕೊಡುವುದು ಮಾಡಬೇಕು ಎನ್ನುವ ವಿಚಾರಗಳನ್ನು ಮಾಡಿದರು.
ಈ ಒಂದು ಸಭೆಗೆ ಉದ್ಬಾಳ ಯು ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಂಜಮ್ಮ,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಆಗಮಿಸಿ ಸ್ವಸ್ಥ ಭಾರತದ ಸಂಕಲ್ಪ,
ಪೋಷಣೆ,ಹೆಚ್ಚುವರಿ ರೋಗ ಪತ್ತೆ ಮತ್ತು ವೃತ್ತಿಪರ ಬೆಂಬಲ ನೀಡುವುದರ ಮೂಲಕ
2025ರ ವೇಳೆಗೆ ದೇಶವನ್ನು ಕ್ಷಯ ಮುಕ್ತಗೊಳಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು,ಪ್ರಧಾನ ಮಂತ್ರಿ ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಆದ್ದರಿಂದ ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ಷಯ ನಿವಾರಣೆಗೆ ಸಾಮೂಹಿಕವಾಗಿ ಕೆಲಸ ಮಾಡಲು ವಿನಂತಿಸಿದರು.
ಇದಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಶ್ರೀ ಮತಿ ಶಾಂತಮ್ಮ ಗಂಡ ಬಸವಲಿಂಗಯ್ಯಸ್ವಾಮಿ ಹುಲ್ಲೂರು,ಹಾಗೂ ಗಾಮ ಪಂಚಾಯತಿಯ ಸದಸ್ಯರಾದ ಶ್ರೀ ಶರಣೇಗೌಡ ಹುಲ್ಲೂರು,ಕೆಂಚಣ್ಣ ಹುಲ್ಲೂರು,ಶ್ರೀ ಅಯ್ಯಪ್ಪ ಹುಲ್ಲೂರು,ಶ್ರೀ ಮತಿ ಲಕ್ಷ್ಮೀ ಉದ್ಬಾಳ,ಶ್ರೀ ಮತಿ ಹನುಮಮ್ಮ ಉದ್ಬಾಳ,ಶ್ರೀ ಮತಿ ಕರಿಯಮ್ಮ ಚಿಕ್ಕಕಡಬೂರು,ಶ್ರೀ ವಿರುಪಣ್ಣ ಚಿಕ್ಕಕಡಬೂರು,ಶ್ರೀ ಬಸವರಾಜ ಚಿಕ್ಕಕಡಬೂರು,ಬಸ್ಸಪ್ಪ ಸುಂಕನೂರು,ಅಯ್ಯಪ್ಪ ಸುಂಕನೂರು,ಶ್ರೀಮತಿ ದುರುಗಮ್ಮ ದುರ್ಗಾಕ್ಯಾಂಪ್ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು,ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಎಚ್. ಕೆ. ಬಡಿಗೇರ್
ಚೀಫ್ ಆಫೀಸರ್ ಸುರೇಶಪ್ಪನ ಚೀಪ್ ಕೆಲಸಗಳು || ಕಾರಟಗಿ ಪುರಸಭೆಯ ಹಗರಣಗಳು