ಮಸ್ಕಿ : ಅಲ್ಪ ಸಂಖ್ಯಾತ ಸಮುದಾಯಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನೂತನ ಮಸ್ಕಿ ತಾಲೂಕಿನಲ್ಲಿ ಮೌಲಾನ ಆಜಾದ್ ಶಾಲೆಯನ್ನು ಆರಂಭಿಸುವುದರ ಮೂಲಕ ದುಡಿಯುವ ವರ್ಗದ ಜನರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿ ಅಲ್ಪಸಂಖ್ಯಾತರ ಪಾಲಿಗೆ ಆಪತ್ಭಾಂದವ ಶಾಸಕ ಆರ್. ಬಸನಗೌಡ ತುರ್ವಿಹಾಳ ರವರು ಆಗಿದ್ದಾರೆ.
ಏಕೆಂದರೆ ಪಟ್ಟಣದಲ್ಲಿ ಶನಿವಾರ ಸರಕಾರಿ ಮೌಲಾನಾ ಆಝಾದ್ ಮಾದರಿ ಶಾಲೆಯ ಉದ್ಘಾಟಿಸಿ ಮಾತನಾಡಿ ಮಸ್ಕಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವೆ ಹಾಗೂ ಗ್ಯಾರಂಟಿ ಯೋಜನೆಯಿಂದ ಸರಕಾರ ಜನಪ್ರಿಯತೆ ಗಳಿಸಿದೆ ಇದನ್ನು ಸಹಿಸದ ಬಿಜೆಪಿ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದೆ.
ಇನ್ನೂ ಮಸ್ಕಿ ಪಟ್ಟಣದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ 2024-25 ನೇ ಸಾಲಿನಿಂದ ಶಾಲೆ ಪ್ರಾರಂಭ ಮಾಡಲಾಗುತ್ತದೆ.
ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ತುರುವಿಹಾಳ ರವರು ಹೇಳಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಗುರುಗಳಾದ ಜಿಲಾನಿ,ತುರುವಿಹಾಳ ಪಟ್ಟಣ ಪಂಚಾಯತಿ ಅಧ್ಯಕ್ಷ ರಾದ ಶಾಮಿದ ಸಾಬ್,ಫಾರೂಕ್ ಸಾಬ ತುರುವಿಹಾಳ,ಎಚ್. ಬಿ.ಮುರಾರಿ,ಮೈಬುಸಾಬ್,ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ,ಬಸವನಗೌಡ ಪೊಲೀಸ್ ಪಾಟೀಲ,ಮಲ್ಲಯ್ಯ ಮುರಾರಿ ಪುರಸಭೆ ಸದಸ್ಯರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರು,ನಾಗಭೂಷಣ ಬಾರಿಕೇರ
ಬಸವನಗೌಡ ಮುದ್ದಬಾಳ,ಹನುಮಂತಪ್ಪ ವೆಂಕಾಟಪುರು,ಮಹಿಬೂಬ ಹಣಗಿ,ಸಿದ್ದು ಮುರಾರಿ,ರವಿ ಮಡಿವಾಳ,ಮಸೂಧ ಪಾಷ,ಶಬ್ಬಿರ್,ಶಿಕ್ಷಕರಾದ ನಟರಾಜ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಕಾರ್ಯಕರ್ತರು ಇದ್ದರು.
ವರದಿ : ಎಚ್.ಕೆ.ಬಡಿಗೇರ್