ಜೂನ್ 21.ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಬಳ್ಳಾರಿಯಲ್ಲಿ ನಡೆದ ಅತ್ಯಾಚಾರ ಕೊಲೆಯನ್ನು ಖಂಡಿಸಿ, ತಪ್ಪಿತಸ್ಥರನ್ನು ಬಂಧಿಸಿ, ಉಗ್ರ ಶಿಕ್ಷೆಗೊಳಪಡಿಸಿ, ಮೃತರ ಕುಟುಂಬಗಳಿಗೆ ಸರಕಾರ ತಲಾ 1 ಕೋಟಿ ರೂಪಾಯಿಗಳು ಅಥವಾ ಸರಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ತಾಲೂಕು ಘಟಕದ ವತಿಯಿಂದ ಮಾನ್ಯ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯವರಿಗೆ ತಹಶಿಲ್ದಾರರ ಮೂಲಕ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ ಎಂ.ಗಂಗಾಧರ ಮಾತನಾಡಿ, ರಾಜ್ಯದಲ್ಲಿ ದಲಿತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆಗಳು ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯನ್ನು ನೀಡದೆ ನ್ಯಾಯ ದೇವತೆಗೆ ನ್ಯಾಯವಿಲ್ಲವಾಗಿದೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ 5 ಗ್ಯಾರಂಟಿ ಜೊತೆಗೆ ದಲಿತರ, ಅಲ್ಪಸಂಖ್ಯಾತರ, ಶೋಷಿತ ಸಮುದಾಯಗಳ ಜೀವದ ಗ್ಯಾರಂಟಿಯನ್ನು ನೀಡುತ್ತೇವೆಂದು ಘೋಷಿಸಬೇಕಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿವಪುರ ಗ್ರಾಮದ, ಅಲೆಮಾರಿ ಸಮುದಾಯದ 13 ವರ್ಷದ ಬಾಲಕಿ ತೇಜಸ್ವಿನಿ ಈ ಮಗು ಐದು ದಿನಗಳ ಹಿಂದೆ 8ನೇ ತರಗತಿಗೆ ಸೇರ್ಪಡೆ ಆಗಿ ವನಶ್ರೀ ಅನ್ನೋ ವಸತಿ ನಿಲಯದ ಪ್ರವೇಶ ಪಡೆದು ಹಾಸ್ಟೆಲ್ ಸೇರಿದ್ದಾಳೆ. ಸೇರಿದ ಐದು ದಿನದಲ್ಲಿ ಮಂಜಪ್ಪ ಅನ್ನುವ ವ್ಯಕ್ತಿ ಬಾಲಕಿಗೆ ಒಂದುವರೆ ಬಕೀಟು ನೀರು ಕುಡಿಸಿ ಆಕೆಗೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯನ್ನು ಬಂದಿಸಿದ್ದು ಸ್ವಾಗತ. ಆದರೇ ಇಂತವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ದಲಿತರ ಮಕ್ಕಳು ಶಾಲೆ ಓದಲಾರದಂತಹ ಪರಿಸ್ಥಿತಿ ರಾಜ್ಯದಲ್ಲಿದೆ.
ಅಲೆಮಾರಿಗಳು ಬಿಕ್ಷಾಟನೆ ಮಾಡಿ ಬೇಡಿಕೊಂಡು ತಿನ್ನುವ ಜನ. ಅಂತವರ ಮಕ್ಕಳನ್ನು ಇಂತಹ ಹೀನಾಯ ಪರಿಸ್ಥಿತಿಗೆ ಶಾಲೆಯ ಮುಖ್ಯಸ್ಥರು ತಂದರೆ, ಇವರನ್ನು ಏನೆಂದೂ ಕರೆಯಬೇಕು ?ರಾಜ್ಯಾದ್ಯಂತ ದಿನ ಬೆಳಗಾದರೇ ದಲಿತರನ್ನು ಅತ್ಯಾಚಾರ,ಕೊಲೆ, ಸುಲಿಗೆ, ಬಹಿಷ್ಠಾರ, ಹಲವಾರು ಹಿಂಸೆಗಳನ್ನು ಸವರ್ಣೀಯರಿಂದ, ನಡಿತಾನೇ ಇದ್ದಾವೆ. ಮಗಳನ್ನು ಕಳಕೊಂಡ ತೇಜಸ್ವಿನಿಯ ತಾಯಿಯ ರೋಧನೆ ಮುಗಿಲು ಮುಟ್ಟಿದೆ.
ಸರಕಾರ ಇಂತಹ ಕೃತ್ಯ ಎಸಗಿದವರಿಗೆ ಅವರ ಮುಷತ್ವವನ್ನು ತೆಗೆಯುವಂತಹ ಕಾನೂನು ಜಾರಿ ಮಾಡಿದರೇ, ಮುಂದಿನ ದಿನಗಳಲ್ಲಿ, ಇಂತಹ ಘಟನೆಗಳು ನಡೆಯುವದಿಲ್ಲ.
ಒಂದು ವಾರದ ಹಿಂದೆ ಬಳ್ಳಾರಿಯಲ್ಲಿ ಕೂಡ ಎಮ್.ವಿ.ಜೆ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರಾದ ಮಹೇಶ ಎಂಬುವರು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಕಾರಣಕ್ಕಾಗಿ, ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿಗೆ ಕಾರಣನಾದ ಮಹೇಶನನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು. ಹೆಣ್ಣು ಮಕ್ಕಳು ಶಾಲಾ ಕಾಲೇಜಿಗೆ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ತಂದೆ-ಕಾಯಂದಿರು ಕಷ್ಟ ಪಟ್ಟು ನಮ್ಮ ಮಕ್ಕಳು ಓದಿ ಮುಂದೆ ಐ.ಐ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಪಡೆದು ಉನ್ನತ ಹುದ್ದೇಗೆ ಸೇರಬೇಕೆಂದು ಅವರ ಅಸೆಯಾಗಿರುತ್ತದೆ. ಆದ್ದರಿಂದ ಸರಕಾರ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಎಲ್ಲಿಯೂ ಕೂಡಾ ಜರುಗದ ಹಾಗೇ ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು ದಲಿತ, ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ತಾಲೂಕು ಸಮಿತಿ ಸಿಂಧನೂರು ಆಗ್ರಹ ಪಡಿಸುತ್ತೇವೆ. ಒಂದು ವೇಳೆ ಸರಕಾರ ನಿರ್ಲಕ್ಷ್ಯ ವಹಿಸಿದರೆ ಮುಂದೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆಂದು ಈ ಮೂಲಕ ಎಚ್ವರಿಕೆಯನ್ನು ನೀಡುತ್ತೇವೆ.
ಈ ಹೋರಾಟದಲ್ಲಿ ಒಕ್ಕೂಟದ ಸಂಚಾಲಕರಾದ, ಮಾಬುಸಾಬ ಬೆಳ್ಳಟ್ಟಿ, ಶ್ಯಾಮಣ್ಣ ಸಿಂದೋಳ್ಳು, ಯಲ್ಲಪ್ಪ ಜವಳಗೇರಾ, ಹೆಚ್.ಆರ್.ಹೊಸಮನಿ, ಹುಲುಗಪ್ಪ ಬಳ್ಳಾರಿ, ರಾಮು ಕೂಡ್ಲಿಗಿ, ತಿಮ್ಮಣ್ಣ ಯಾದವ, ಗೌಸಖಾನ್ ಕಲಮಂಗಿ, ಖಾಜಾಸಾಬ, ಬುಡ್ಡಸಾಬ ಜಾಲವಾಡ್ಗಿ, ನಾಗೇಶ, ಲಕ್ಷ್ಮಣ ಜವಳಗೇರಾ, ರಂಜಾನ್ ಸಾಬ ಸೇರಿದಂತೆ ಇತರರು ಇದ್ದರು.