ಎನ್ನ ಒಲವಿನ ನಿಷ್ಕಲ್ಮಶ ಮನಸ್ಸಿನ ಮುದ್ದು ಮನಸ್ಸಿಗೆ ಸ್ವಚ್ಛಂದ ಪ್ರೀತಿಗೆ
ಎನ್ನ ಬಲ ಭರವಸೆಯಾದ ಬದುಕಿನ ಬಂಗಾರಕ್ಕೆ
ಎನ್ನ ಒಡಲ ಸವಿ ಕ್ಷಣಗಳಿಗೆ
ಕಾರಣವಾದ ಒಡೆಯನಿಗೆ
ಎನ್ನ ಕಣ್ಣ ರೆಪ್ಪೆಯಂತೆ ಕಾಯ್ದು
ಕಾಳಜಿ ತೋರುವ ಕರುಣೆಯ ಸಾಗರಕ್ಕೆ
ಎನ್ನ ವಿದ್ಯಾಭ್ಯಾಸಕ್ಕೆ ವಿನಯದಿಂದಲೇ
ಸದಾ ಬೆನ್ನೆಲುಬಾಗಿ ಸಹಕಾರವಿತ್ತ
ಸಹಕಾರ ಮೂರ್ತಿಯೇ
ಎನ್ನ ಸರ್ವವು ಸಕಲವು ಆದ ಅಪ್ಪಟ ಅಪರಂಜಿಗೆ
ಪ್ರೀತಿಯ ಆತ್ಮೀಯವಾದ ಬೆಲೆ ಕಟ್ಟಲಾಗದ ಮಾಣಿಕ್ಯವೇ
ನಿಮಗಿದು ಈ ಒಲವಿನ ಉಡುಗೊರೆ
ಅಕ್ಷರಗಳಿಗೆ ಸಿಗದ ಆಕಾಶದಂತೆ ನೀನು
ನಿನ್ನೊಳಗೆ ನಿನಗರಿಯದಂತೆ
ನನಗಾಗಿ ಬದುಕಿದ ಒಲವಿನ ಮುತ್ತು ಮಾಣಿಕ್ಯವೇ
ಮುಂದಿನ ದಿನಗಳು ಹೇಗೆ ಬಂದರು ಹೇಗಿದ್ದರೂ
ಎದರಿಸುವ ಕಿಂಚುತ್ತು ತೊಂದರೆಯಾಗದಂತೆ ನೋಡಿಕೊಳ್ಳುವ
ಹೃದಯ ಸಾಮ್ರಾಟನಿಗೆ ನಿನ್ನ ಹೃದಯದರಸಿಯಿಂದ
ಹೃದಯದಿಂದ ಶುಭಕೋರುವೆ ಸಕಲಾವು ಸಿದ್ಧಿಸಿ
ಸಾಧನೆಯ ಶಿಖರ ಲಭಿಸಲೆಂದು………..!
ಇಂತಿ ನಿಮ್ಮ
ಬಂಗಾರ