ಮೇ 22. ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಅಬೂತಪೂರ್ವ ಗೆಲುವು ಸಾಧಿಸಿದ ಹಾಗೂ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಶ್ರೀ ಹಂಪನಗೌಡ ಬಾದರ್ಲಿ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಚೊಚ್ಚಲ ಅಧಿವೇಶನದಲ್ಲಿ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಹಂಪನಗೌಡ ಬಾದರ್ಲಿ ಅವರು ಹಂಪನಗೌಡ ಬಾದರ್ಲಿ ಎಂಬ ಹೆಸರಿನವನಾದ ನಾನು ವಿಧಾನಸಭೆ ಸದಸ್ಯನಾಗಿ ನಿರ್ವಾಚನ ಹೊಂದಿದವನಾಗಿ ವಿಧಿದ್ವಾರ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ಶ್ರದ್ಧೆಯಿಂದಲೂ ನಿಷ್ಠೆಯಿಂದಲೂ ಕೂಡ ಇರುತ್ತೇನೆ ನಾನು ಭಾರತದ ಪರಮಾಧಿಕಾರವನ್ನು ಮತ್ತು ಸಮಗ್ರತೆಯನ್ನು ಸಮರ್ಥಿಸುತ್ತೇನೆ ಎಂದು ನಾನು ಈಗ ಕೈಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾ ಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ಭಗವಂತನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಮತ್ತು ಸತ್ಯ ನಿಷ್ಠೆಯಿಂದ ಸ್ವೀಕರಿಸುತ್ತೇನೆ ಎಂದು ಪ್ರಮಾಣವಚನ ಮಾಡಿದರು.