ಏಪ್ರಿಲ್ 20. ರಾಜ್ಯದಲ್ಲಿ ಮೇ ಹತ್ತರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ನಾನ್ ಮೇಲು ನಿನ್ ಮೇಲು ಎಂದು ತಾತ ಮತ್ತು ಮೊಮ್ಮಗನ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿತ್ತು ಆದರೆ ಸಿದ್ದರಾಮಯ್ಯ ಹಾಗೂ ಕರ್ಜಿಯವರ ಬಣದ ಪರವಾಗಿ ಗುರುತಿಸಿಕೊಂಡಿದ್ದ ಶ್ರೀ ಹಂಪನಗೌಡ ಬಾದರ್ಲಿ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ ದುರದೃಷ್ಟವತ ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ ಅವರ ಬಣದ ಪರ ಗುರುತಿಸಿಕೊಂಡಿದ್ದ ಶ್ರೀ ಬಸವನಗೌಡ ಬಾದರ್ಲಿ ಯವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿದ್ದರಿಂದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಭೆ ಕರೆದು ಬಂಡಾಯದ ಬಿಸಿ ಮೂಡಿಸಲು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಇಂದು ಅದ್ದೂರಿಯಾಗಿ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಕರೆದುಕೊಂಡು ನಾಮಪತ್ರ ಸಲ್ಲಿಸಿದರ ಇದನ್ನು ಮೊದಲೇ ಮಾಹಿತಿ ಪಡೆದಿದ್ದ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ನಲಪಾಡ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜಿವಾಲಾ ರವರು ಸಿಂಧನೂರಿನ ಜನ ಸ್ಪಂದಾನ ಕಾರ್ಯಾಲಯಕ್ಕೆ ಮನ ಒಲಿಸಲು ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಕ್ಷೇತ್ರಾದ್ಯಂತ 5 ಕೋಟಿ ಹಣವನ್ನು ತೆಗೆದುಕೊಂಡು ಒಪ್ಪಂದ ರಾಜಕೀಯ ಮಾಡುತ್ತಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.
ಆದರೆ ನಾನು ಆರಾಧಿಸುವ ಶ್ರೀಶೈಲ ಮಲ್ಲಿಕಾರ್ಜುನನ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ಯಾವುದೇ ರೀತಿಯ ಹಣವನ್ನು ತೆಗೆದುಕೊಂಡಿಲ್ಲ.
ನಿಮ್ಮ ಸೇವೆಗಾಗಿ ನಿಮ್ಮ ಮೇಲಿನ ಪ್ರೀತಿಗಾಗಿ ನೀವು ನನ್ನ ಮೇಲೆ ಇಟ್ಟ ನಂಬಿಕೆಗಾಗಿ ರಾಜಕೀಯ ಮಾಡುತ್ತಿದ್ದೇನೆ. ನಿಮ್ಮನ್ನು ಹೊರೆತು ನಾನಿಲ್ಲ. ನಿಮ್ಮ ತೀರ್ಮಾನವೇ ಅಂತಿಮ ಎಂದು ಭಾವುಕರಾಗಿ ಹೇಳಿದರು.