ಸಿಂಧನೂರು ಆಗಸ್ಟ್ 22.ಕರ್ನಾಟಕ ಸರಕಾರದ ಭೂಮಿಯನ್ನು ಅಕ್ರಮ ಭೂ ಕಬಳಿಕೆ ಮಾಡಿದ ಜವಳಗೇರಾ ನಾಡಗೌಡರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ! ಜೈಲಿಗೆ ತಳ್ಳಿ ! ಅಕ್ರಮ ಸಾಗುವಳಿ ಭೂ ಕಂದಾಯ ವಸೂಲಿ ತಾಲೂಕಿನಾದ್ಯಂತ ಸರಕಾರಿ ಭೂ ಕಬಳಿಕೆದಾರರನ್ನು ತೆರವುಗೊಳಿಸಿ ! ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಎಲ್ಲಾ ಜಾತೀಯ ಭೂಹೀನ ಬಡವರಿಗೆ ಹಂಚಲು ಆಗ್ರಹ ! ಸಿಂಧನೂರು ಕಂದಾಯ ಗ್ರಾಮದ ಸರಕಾರಿ ಸರ್ವೆ ನಂಬರ್ 419/ಪಿ1 32.11 ಎಕರೆ ಹಾಗೂ ಸುಲ್ತಾನಪೂರ ಸರಕಾರಿ ಸರ್ವೆ ನಂಬರ್ 186, 29.31 ಎಕರೆ ಭೂಮಿಯನ್ನು ಕಳೆದ 43 ವರ್ಷಗಳಿಂದ ಒಟ್ಟು 61 ಎಕರೆ ಕೋಟಿಗಟ್ಟಲೆ ಬೆಲೆಬಾಳುವ ಸರಕಾರಿ ಹೆಚ್ಚುವರಿ ಭೂಮಿಯನ್ನು ಅಕ್ರಮ ಸಾಗುವಳಿ ಮಾಡಿ ಸರಕಾರಕ್ಕೆ ಹಾಡುಹಗಲೇ ವಂಚನೆ ಮಾಡಿದ ಜವಳಗೇರಾ ನಾಡಗೌಡರ ಕುಟುಂಬದ ಮೇಲೆ ಸರಕಾರಿ ಕ್ರಿಮಿನಲ್ ಕೇಸ್ ದಾಖಲಿಸಿ, ಜೈಲಿಗೆ ತಳ್ಳಿ, ಕಳೆದ 43 ವರ್ಷಗಳಿಂದ ಸಾಗುವಳಿ ಮಾಡಿದ ಭೂ ಕಂದಾಯವನ್ನು ಸರಕಾರ ವಸೂಲಾತಿ ಮಾಡಬೇಕೆಂದು ಕರ್ನಾಟಕ ರೈತ ಸಂಘದಿಂದ ತಾಲೂಕು ಆಡಳಿತಕ್ಕೆ ಒತ್ತಾಯಿಸಲಾಗುತ್ತದೆ.
ಸದರಿ ಮೇಲ್ಕಾಣಿಸಿದ ಸರಕಾರಿ ಭೂಮಿಗೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಎಲ್ಲಾ ಜಾತಿಯ ಭೂ ಹೀನ ಬಡವರು ಫಾರಂ. ನಂ. 1 ರಲ್ಲಿ ಭೂ ಮಂಜೂರಾತಿಗಾಗಿ, 30 ಜನರು ಅರ್ಜಿ ಹಾಕಿ ಸಾಗುವಳಿಗೆ ದಿನಾಂಕ : 19.08.2023ರಂದು ಹಾಗೂ ದಿನಾಂಕ : 20.08.2023ರಂದು ಮುಂದಾದಾಗ ಗೂಂಡಾ ಗ್ಯಾಂಗ್ನ ಜೊತೆ ಬಂದ ರಾಜಶೇಖರಗೌಡ/ವೆಂಕಟರಾವ್ ನಾಡಗೌಡ ಹಾಗೂ ಚಂದ್ರುಗೌಡ/ವೆಂಕಟರಾವ್ ನಾಡಗೌಡ ಜವಳಗೇರಾ ಹಾಗೂ ಜವಳಗೇರಾದ 50 ರಿಂದ 60 ಜನ ಕಿರಾಯಿ ಗೂಂಡಾಗಳನ್ನು ಕರೆದುಕೊಂಡು ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ದಲಿತ, ಅಲ್ಪಸಂಖ್ಯಾತ, ಭೂಹೀನ ಬಡವರ ಮೇಲೆ ಗೂಂಡಾಗಿರಿಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಹಾಕಿದ ನೌಡಗೌಡ ಹಾಗೂ ಬಾಡಿಗೆ ಗೂಂಡಾಗಳ ಮೇಲೆ ಕ್ರಿಮಿನಲ್ ಸರಕಾರಿ ಕೇಸ್ ದಾಖಲಿಸಿ, ಬಂಧಿಸಿ, ಜೈಲಿಗೆ ತಳ್ಳಿ, ಇದುವರೆಗೂ ಸರಕಾರಿ ಭೂಮಿಯನ್ನು ಅಕ್ರಮ ಸಾಗುವಳಿ ಮಾಡಿದ ಭೂ ಕಂದಾಯವನ್ನು ವಸೂಲಿ ಮಾಡಬೇಕೆಂದು ನಮ್ಮ ಆಗ್ರಹವಾಗಿದೆ.
ಹಾಗೆಯೇ ತಾಲೂಕಿನಲ್ಲಿ ಸರಕಾರಿ ಭೂಮಿ ಅಕ್ರಮ ಸಾಗುವಳಿ ಮತ್ತು ಒತ್ತುವರಿ ಮಾಡಿದ ನಾಡಗೌಡರ ಕುಟುಂಬ ಸೇರಿದಂತೆ ಇತರೆ ಅಕ್ರಮ ಭೂಗಳ್ಳರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಭೂಹೀನ ಎಲ್ಲಾ ಜಾತೀಯ ಬಡವರಿಗೆ ವಿತರಿಸಬೇಕೆಂದು ಆಗ್ರಹಿಸಿ ! ಹಾಗೂ ಅಕ್ರಮ-ಸಕ್ರಮದಡಿಯಲ್ಲಿ ಅರ್ಜಿ ಫಾರಂ, 1, 57, 94ಸಿ, 94ಸಿಸಿ, ಹಾಕಿದ ಅರ್ಜಿದಾರರಿಗೆ ಸರಕಾರಿ ಭೂಮಿ ಮತ್ತು ವಸತಿಯನ್ನು ಭೂಹೀನ ಬಡವರಿಗೆ ಮತ್ತು ಸರಕಾರಿ ಜಾಗದಲ್ಲಿ ಸುಮಾರು ವರ್ಷಗಳಿಂದ ವಾಸ ಮಾಡುತ್ತೀರುವ ನಿವೇಶನ ರಹಿತರಿಗೆ ಭೂ ಪಟ್ಟಾ ಮತ್ತು ಹಕ್ಕುಪತ್ರಗಳನ್ನು ನೀಡಲು ಒತ್ತಾಯಿಸಿ, ದಿನಾಂಕ : 24.08.2023 ಗುರುವಾರದಂದು ತಾಲೂಕು ಕಛೇರಿ ಮುಂದೆ ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿ ಬರುವವರೆಗೆ ಧರಣಿ ಸತ್ಯಾಗ್ರಹವನ್ನು ನಡೆಸಲಾಗುತ್ತದೆ. ಈ ಭೂ ಹೋರಾಟಕ್ಕೆ ತಾಲೂಕಿನ ದಲಿತ, ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನ, ಕನ್ನಡಪರ ಹಾಗೂ ಜನಪರ ಸಂಘಟನೆಗಳು ಬೆಂಬಲಿಸಿ ಭಾಗವಹಿಸಬೇಕೆಂದು ನಮ್ಮ ವಿನಂತಿಯಾಗಿದೆ.
ಗೋಷ್ಠಿಯಲ್ಲಿ ಭಾಗವಹಿಸಿದವರು : ಆದೇಶ ನಗನೂರು, ಹೆಚ್.ಆರ್.ಹೊಸಮನಿ ಹುಲುಗಪ್ಪ ಬಳ್ಳಾರಿ, ವೆಂಕಟೇಶ ನಾಯಕ ಎಂ.ಗಂಗಾಧರ ರಾಜ್ಯ ಸಮಿತಿ ಸದಸ್ಯರು ಸಿಪಿಐ(ಎಂಎಲ್)ರೆಡ್ ಸ್ಟಾರ್ ಮಲ್ಲಯ್ಯ ಕಟ್ಟಿಮನಿ ಜಿಲ್ಲಾಧ್ಯಕ್ಷ ಕರ್ನಾಟಕ ರೈತಸಂಘ-AIKKS ಸಂತೋಷ ಹಿರೇದಿನ್ನಿ ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ರೈತಸಂಘ-AIKKS ಮಾಬುಸಾಬ ಬೆಳ್ಳಟ್ಟಿ ತಾಲೂಕು ಕಾರ್ಯದರ್ಶಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಹನುಮಂತಪ್ಪ ಗೋಡ್ಯಾಳ ತಾಲೂಕು ಉಪಾಧ್ಯಕ್ಷರು ಕರ್ನಾಟಕ ರೈತಸಂಘ-AIKKS ಹಾಗೂ ಇತರರು.