ಸಿಂಧನೂರು ಜೂ.19: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಪಟ್ಟಣದ ಬಸ್ ನಿಲ್ದಾಣವು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ ಯಾವುದೇ ಪ್ಲಾಟ್ ಫಾರಂಗೆ ಬಸ್ಸುಗಳು ಬಂದು ನಿಲ್ಲುವುದೇ ತಡ ಮಹಿಳಾ ಪ್ರಯಾಣಿಕರು ಬಸ್ಸಿನ ಒಳ ನುಗ್ಗುತ್ತಿದ್ದಾರೆ.
ಕಿಟಕಿಯಿಂದ ಸೀಟು ಹಿಡಿಯಲು ಮಕ್ಕಳನ್ನು ಕಿಟಕಿಯಿಂದ ಎಸೆಯುವುದು ಬ್ಯಾಗ್ ಮತ್ತು ಕರವಸ್ತ್ರಗಳನ್ನು ಎಸೆಯುತ್ತಿದ್ದಾರೆ ಅಲ್ಲದೆ ನೂಕು ನುಗ್ಗಲಿನಲ್ಲಿ ಕಳ್ಳರ ಕಾಟವನ್ನು ಲೆಕ್ಕಿಸದೆ ಸೀಟಿಗಾಗಿ ಹರಸಾಹಸ ಪಡುವಂತಾಗಿದೆ.
ಸಿಂಧನೂರು ನಗರದ ಬಸ್ ನಿಲ್ದಾಣದಿಂದ ಮಸ್ಕಿ ಮಾರ್ಗವಾಗಿ ಹೋಗುತ್ತಿದ್ದ ಬಸ್ನಲ್ಲಿ ಅತಿ ಹೆಚ್ಚು ಮಹಿಳಾಮಣಿಯರು ತುಂಬಿ ನಾನು ನೀನು ಎಂದು ಸೀಟಿಗಾಗಿ ಕಿಟಕಿಯಿಂದ ನುಸುಳುವ ಸಂದರ್ಭದಲ್ಲಿ ಪ್ರಯಾಣಿಕರ ಆಕ್ರೋಶಕ್ಕೆ ಕಿಟಕಿ ಗಾಜು ಪುಡಿ ಪುಡಿಯಾಗಿದೆ.
ಯಾವುದೇ ಯೋಜನೆಗಳಾಗಲಿ ಅಥವಾ ಘೋಷಣೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನ ಅವುಗಳ ಸಾಧಕ ಮತ್ತು ಬಾಧಕಗಳ ಕುರಿತು ತಜ್ಞರ ಸಲಹೆ ಪಡೆದು ಚಿಂತನೆ ನಡೆಸಬೇಕು ಜೊತೆಗೆ ಸಾರ್ವಜನಿಕರಿಗೆ ಯೋಜನೆಗಳು ಪೂರಕವಾಗಬೇಕೆ ಹೊರತು ಮಾರಕವಾಗಬಾರದು ಎಂದು ಸಾರ್ವಜನಿಕರು ಶಕ್ತಿ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.