ಸಿಂಧನೂರ್ ಮಾರ್ಚ್ 05. ಭಾರತೀಯ ವೈದ್ಯಕೀಯ ಸಂಘ ಸಿಂಧನೂರ್,ಮಹಿಳಾ ವೈದ್ಯರ ಘಟಕ ಸಿಂಧನೂರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವರ ಸಯುಕ್ತ ಆಶ್ರಯದಲ್ಲಿ ಕ್ಯಾನ್ಸರ್ ಮುಂಜಾಗ್ರತೆ ಅರಿವು ಕಾರ್ಯಕ್ರಮ (ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್) ಬಗ್ಗೆ ದಿನಾಂಕ 7.3.2024 ಗುರುವಾರರಂದು ಮಧ್ಯಾಹ್ನ 2 ಗಂಟೆಗೆ ನಗರದ ಟೌನ್ ಹಾಲ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಹಾಗೂ ಖ್ಯಾತ ಮಕ್ಕಳ ವೈದ್ಯರಾದ ಡಾ. ಶಿವರಾಜ್ ಪಾಟೀಲ್ ಸಹನಾ ಮಕ್ಕಳ ಆಸ್ಪತ್ರೆ ಸಿಂಧನೂರ್ ಹೇಳಿದ್ದಾರೆ.
:: ಗರ್ಭಕೋಶ ಕ್ಯಾನ್ಸರ್ ಲಸಿಕೆ ಬಗ್ಗೆ ಮಾಹಿತಿ ಕೊಡಲಾಗುವುದು ::
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಡಾ.ಪದ್ಮ ಪಾಟೀಲ್ ಸ್ತ್ರೀರೋಗ ತಜ್ಞರು, ಡಾ. ಅಭಿನಯತ್ರಿ ಪಾಟೀಲ್ ಶ್ರೀ ರೋಗ ತಜ್ಞರು ಉಪಸ್ಥಿತಿಯನ್ನು ಡಾ.ಕೆ ಶಿವರಾಜ್ ಪಾಟೀಲ್ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಿಂಧನೂರ್ ಅತಿಥಿಗಳಾಗಿ ಸೋಮಶೇಖರ್ ಗೌಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂಧನೂರ್ ಹಾಗೂ ಮಂಜುನಾಥ್ ಗುಂಡುರು ಪೌರಾಯುಕ್ತರು ನಗರಸಭೆ ಸಿಂದನೂರ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
“”ಮೊದಲ ಹಂತದ ಕ್ಯಾನ್ಸರ್ ಪತ್ತೆ ಹಚ್ಚಿ ಸಂಪೂರ್ಣ ಗುಣಮುಖರಾಗಿ””