ಏಪ್ರಿಲ್ 09 .ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದ ಒಳಗಿನ ಓರೆಕೋರೆಗಳನ್ನು ಸರಿಪಡಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಎಲ್ಲ ರೀತಿಯಿಂದಲೂ ಎಚ್ಚರಿಕೆ ನಡೆ ಇಡ್ತಿದೆ. ಈ ಹಿನ್ನೆಲೆಯಲ್ಲಿ 224 ವಿಧಾನಸಭೆ ಕ್ಷೇತ್ರಗಳಲ್ಲಿ ತಲೆದೋರಿರುವ ಆಂತರಿಕ ಭಿನ್ನಮತ ತಣಿಸಲು ಪ್ಲಾನ್ ರೂಪಿಸುತ್ತಿದೆ.
ಅದೇ ರೀತಿ ಭತ್ತದ ನಾಡು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಾಕಷ್ಟು ಆಕಾಂಕ್ಷಿಗಳಿದ್ದಾರೆ ಇವರೆಲ್ಲರನ್ನು ಯಾವ ರೀತಿ ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಾರೆ ಯಾವ ರೀತಿ ಸಮಾಧಾನಪಡಿಸುತ್ತಾರೆ ಎಂದು ಹೋಟೆಲ್ ಒಂದರಲ್ಲಿ ಮತದಾರರ ಮಾತಾಗಿದೆ.
ಇದರಲ್ಲಿ ಪ್ರಮುಖವಾಗಿ ಕೇಳಿ ಬರುವಂತಹ ಹೆಸರುಗಳು ಮಾಜಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಕರಿಯಪ್ಪ, ಖ್ಯಾತ ಉದ್ಯಮಿಗಳಾದ ರಾಜೇಶ್ ಹಿರೇಮಠ,ಕೆಫೆಕ್ ಅಧ್ಯಕ್ಷರಾದ ಕೆ ವಿರುಪಾಕ್ಷಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಮರೇಗೌಡ ವಿರೂಪಪುರ್, ಮಾಜಿ ನಗರಸಭಾಧ್ಯಕ್ಷ ಕೆ ಮರಿಯಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವನಗೌಡ ಗೊರೆಬಾಳ ಹಾಗೂ ಈಗಿನ ಕಾಡ ಅಧ್ಯಕ್ಷ ಕೊಲ್ಲ ಶೇಷಗಿರಿ ರಾವ್ ಹೆಸರುಗಳು ಕೇಳಿ ಬರುತ್ತದೆ ಜೊತೆಗೆ ಕಾಂಗ್ರೆಸ್ ಟಿಕೆಟ್ ಸಿಗದೇ ಹೋದರೆ ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಕೂಡ ಬಿಜೆಪಿಗೆ ಬರುತ್ತಾರೆ ಎಂದು ಊಹಾಪೋಹದ ಸುದ್ದಿಗಳು ಕೇಳಿ ಬರುತ್ತಿವೆ.
2018 ರಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಸಂಘಟನೆಯನ್ನು ಗಟ್ಟಿಗೊಳಿಸಿ 14795 ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದ ಕೊಲ್ಲಾ ಶೇಷಗಿರಿ ರಾವ್ ಗೆ ಟಿಕೆಟ್ ಕೊಡುತ್ತಾರೆ ಎಂಬ ನಂಬಿಕೆ ಮೇಲೆ ಹೋರಾಡುತ್ತಿದ್ದಾರೆ ಆದರೆ ಈಗಾಗಲೇ ಅವರಿಗೆ ಕಾಡ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಹೀಗಾಗಿ ಅವರಿಗೆ ಟಿಕೆಟ್ ನೀಡುವುದು ಅನುಮಾನ ಎಂಬುದು ಕಾರ್ಯಕರ್ತರ ಒಳಗುಟ್ಟು.
ಮಾಜಿ ಸಂಸದರು ಈಗಿನ ಕೆಫೆಕ ಅಧ್ಯಕ್ಷರಾದ ಕೆ ವಿರುಪಾಕ್ಷಪ್ಪ ಅವರಿಗೆ ಕೂಡ ಟಿಕೆಟ್ ನೀಡುವುದು ಅನುಮಾನ ಯಾಕೆಂದರೆ ಈಗಾಗಲೇ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ಸಮಾಧಾನ ಪಡಿಸಲಾಗಿದೆ ಹೀಗಾಗಿ ಅವರಿಗೆ ಕೂಡ ಬಿಜೆಪಿ ಟಿಕೆಟ್ ನೀಡುವುದು ಅನುಮಾನ ಎಂದು ಕೇಳಿಬರುತ್ತಿದೆ.
ಜೊತೆಗೆ ಕೆ ವಿರುಪಾಕ್ಷಪ್ಪ ಅವರ ಸಂಬಂಧಿಯಾದ ಕೆ ಕರಿಯಪ್ಪ ಅವರಿಗೆ ಟಿಕೆಟ್ ನೀಡಬಹುದು ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ ಯಾಕೆಂದರೆ 2013ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಆರ್ಸಿಪಿ ಪಕ್ಷದಿಂದ 36,197 ಅಲ್ಪ ಮತಗಳ ಮೂಲಕ ಎರಡನೆಯ ಸ್ಥಾನವನ್ನು ಗಳಿಸಿದ್ದರು. ಹೀಗಾಗಿ ಈ ಬಾರಿ ಬಿಜೆಪಿ ಟಿಕೆಟ್ ನೀಡಿದರೆ ಗೆಲ್ಲಬಹುದು ಎಂಬುವುದು ಬಿಜೆಪಿ ಅಭಿಮಾನಿಗಳ ಮಾತಾಗಿದೆ.
ಇನ್ನು ಉದ್ಯಮಿ ರಾಜೇಶ್ ಹಿರೇಮಠ್ ಕೆಲವು ದಿನಗಳ ಹಿಂದೆ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದಾರೆ ಹೀಗಾಗಿ ಕೆಲವೊಂದು ಹಳ್ಳಿಗಳಲ್ಲಿ ಅವರು ಯಾರು ಎಂಬುದು ಗೊತ್ತಿಲ್ಲ ಎಂಬುದು ಮತದಾರರ ಮಾತು ಜೊತೆಗೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಅಮರೇಗೌಡ ವಿರುಪಾಪುರ ಶಿವನಗೌಡ ಗೊರೆಬಾಳ ಮತ್ತು ಕೆ.ಮರಿಯಪ್ಪ ಅವರು ಒಳಗೊಳಗೆ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕೇಳಿ ಬರುತ್ತದೆ.
ಮತ್ತು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಬಗ್ಗೆ ಹೇಳುವುದಾದರೆ ಕಾಂಗ್ರೆಸ್ ಪಕ್ಷದಲ್ಲಿ ಅವರದೇ ಆದಂತ ಗೌರವ ಮತ್ತು ಅಭಿಮಾನವನ್ನು ಹೊಂದಿದ್ದಾರೆ ಜೊತೆಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಪಾಲಿಸುತ್ತಾ ಬಂದಿದ್ದಾರೆ ಹಾಗದರೆ ಊಹ ಪೋಹಗಳಿಗೆ ಅಂತ್ಯವಾಡಲಿದ್ದಾರಾ….? ಅಥವಾ ಹಂಪನಗೌಡ ಬಾದರ್ಲಿ ಬಿಜೆಪಿ ಸೇರಲಿದ್ದಾರಾ ಎನ್ನುವುದು ಜನತ ಜನಾರ್ಧನ ಮಾತಾಗಿದೆ.