ನಗರದ ಎಲ್ ಬಿ.ಕೆ ಪದವಿ ಪೂರ್ವ ಮತ್ತು ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆಯನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ,ಮಹಾತ್ಮ ಗಾಂಧಿ, ಡಾ ಬಿ.ಆರ್ ಅಂಬೇಡ್ಕರ್ ಅವರಿಗೆ ಮಾಲಾರ್ಪಣೆಪೂಜೆ ಮಾಡಿದ ನಂತರ ಸಂಸ್ಥೆಯ ಖಜಾಂಚಿಗಳು ಜಯಪ್ಪ ಗೊರೇಬಾಳ ಧ್ವಜಾರೋಹಣ ನೇರವೆರಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ನರೇಶ ಮಾತಾನಾಡುತ್ತಾ, ಇಂದು ನಾಡಿನಾದ್ಯಂತ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್ ಗುಲಬರ್ಗಾ ರಾಯಚೂರು ಯಾದಗಿರಿ ಕೊಪ್ಪಳ ಬಳ್ಳಾರಿ, ವಿಜಯನಗರ ಗಳಲ್ಲಿ ಅದ್ದೂರಿಯಾಗಿ ಅಮೃತ ಮಹೋತ್ಸವದ ಉತ್ಸವದಲ್ಲಿದ್ದೆವೆ ಇದಕ್ಕೆ ಅನೇಕ ಜನರ ತ್ಯಾಗದಿಂದ ಸ್ವಾತಂತ್ರ್ಯ ಗೊಂಡಿದೆ. ಭಾರತದ ಒಕ್ಕೂಟಕ್ಕೆ ಮೂರು ಸಂಸ್ಥಾನಗಳು ಸೇರಲು ನಿರಾಕರಿಸದವು .ಅದರಲ್ಲಿ ಹೈದರಾಬಾದ್ ಕರ್ನಾಟಕದ ನಿಜಾಮ ಸೇರಲು ನಿರಾಕರಿಸುತ್ತಾ ರಜಾಕಾರರ ಗುಂಪು ಕಟ್ಟಿಕೊಂಡು ಈ ಭಾಗದ ಜನತಗೆ ನಾನ ಕಿರುಕುಳ ಕೊಟ್ಟು ತನ್ನ ಸರ್ವಾಧಿಕಾರವನ್ನು ಮೆರದಿದ್ದನ್ನು.ಇಂತಹ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅಪರೇಷನ್ ಪೊಲೊ ಕಾರ್ಯಚರಣೆಯ ಮೂಲಕ ನಮ್ಮ ಭಾಗದ ಜನತೆಗೆ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೧೩ ತಿಂಗಳು ನಂತರ ಸ್ವಾತಂತ್ರ್ಯ ಸಿಕ್ಕು ಈಗ 75 ನೇ ವರ್ಷದ ಅಮೃತ ಮಹೋತ್ಸವದಲ್ಲಿ ಇರುವುದು ಸಂತೊಷ ತಂದಿದೆ.ಆದರೆ,ಆಡಳಿತ ಸರ್ಕಾರಗಳು ಈ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಾ, ಬರುತ್ತಿರುವುದು ವಿಷಾದನೀಯ ಸಂಗತಿ.