ಬಾಗಲಕೋಟೆ : ದಿನದಿಂದ ದಿನಕ್ಕೆ ಕೃಷ್ಣಾ ನದಿ ನೀರು ಖಾಲಿ ಯಾಗುತ್ತಿರುವುದನ್ನು ತಡೆಗಟ್ಟುಲು ಆಲಮಟ್ಟಿ ಹಿನ್ನಿರನ್ನು ಬಿಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಘದ ಹಾಗೂ ಭಾರತೀಯ ಕಿಸಾನ್ ಸಂಘ ನೇತೃತ್ವದಲ್ಲಿ ರೈತರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ರೈತ ಮುಖಂಡ ಶಿವನಗೌಡ ಪಾಟೀಲ್ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ಕೊರ್ತಿ,ಟಕ್ಕಳಕಿ, ಗೋವಿನದಿನ್ನಿ, ರೊಳ್ಳಿ,ಗರಡದಿನ್ನಿ ಢವಳೇಶ್ವರ, ಸೊನ್ನ,ಗಿರಾಗಂವ ಬಾಡಗಿ,ಹಂಚಿನಾಳ ಗ್ರಾಮದ ರೈತರು ಕೃಷ್ಣಾ ಹಾಗೂ ಘಟಪ್ರಭಾ ನದಿಯನ್ನೇ ನಂಬಿ ಜನಜಾನುವಾರುಗಳು ಬದುಕುತ್ತಿವೆ. ಬೇಸಿಗೆ ಆರಂಭಕ್ಕೆ ಮುನ್ನವೇ ತಾಲೂಕಿನ ಕೃಷ್ಣಾ ನದಿಯ ನೀರು ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರನ್ನು ತಡೆಹಿಡಿಬೇಕು. ಯಾಕೆಂದರೆ ಕಳೆದ ಏಳೆಂಟು ವರ್ಷಗಳ ಹಿಂದೆ ಕೃಷ್ಣಾ ನದಿಯ ನೀರು ಖಾಲಿಯಾಗಿ ತೊಂದರೆಯನ್ನು ಅನುಭವಿಸಿದ್ದಾರೆ. ಕೂಡಲೇ ಅಂತಹ ಸಮಸ್ಯೆ ಮರುಕಳಿಸುವ ಮುನ್ನ ಎಚ್ಚೆತ್ತುಕೊಂಡು ಸಂಬಂಧಪಟ್ಟವರು ನೀರನ್ನು ತಡೆಹಿಡಿದು ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.ಮೂರು ದಿನಗಳಲ್ಲಿ ನೀರನ್ನು ತಡೆಹಿಡಿಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿ ತಹಸಿಲ್ದಾರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿದ್ದಣ್ಣ ಗಾಡದ,ವಿರೂಪಾಕ್ಷಯ್ಯ ಹಿರೇಮಠ ಭಾರತ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರು,ಡಿ ಎಂ ನದಾಫ್ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅನಿಲಗೌಡ ಪಾಟೀಲ್, ಮಾಹಾಂತೇಶ್ ಜಾರಾಳಿ,ಅವಿನಾಶ್ ಘೋರ್ಪಡೆ,ಅರವಿಂದ್ ಚೂರಿ,ನಾಗಪ್ಪ ಗುಂಜೆಟಿ,ಸತೀಶ್ ಜಾಧವ,ಸಚಿನ್ ಪತ್ತಾರ,ಅಮೀನಸಾಬ್ ಬುಕಿಟಗಾರ್, ಕುಮಾರ್ ಹಿರೇದೇಸಾಯಿ, ಶ್ರೀಶೈಲ ಬರಗುಂಡಿ, ಹಣಮಂತ ದಳವಾಯಿ,ಶ್ರೀಕಾಂತ ರೋನಿಹಾಳ್,ಹಣಮಂತ ಮಳಗಾವಿ,ಮಲ್ಲಿಕಾರ್ಜುನ ತಳವಾರ,ಕೃಷ್ಣಾ ಜಾಧವ, ಯಂಕಪ್ಪ ಶಿರಬೂರ,ಸಿದ್ದಪ್ಪ ದೇಸಾಯಿ,ಹಣಮಂತ ನಂದವಾಡಗಿ,ಅರವಿಂದ್ ಪೂಜಾರಿ,ವಿಠ್ಠಲ್ ಕಾರಜೋಳ, ಸೇರಿ ಅನೇಕರು ಈ ವೇಳೆ ಉಪಸ್ಥಿತರಿದ್ದರು.
ವರದಿ :- ರಾಜು ಬುಕೇಟಗಾರ್