ರಾಯಚೂರು.ಅ.೦೩ ಲಿಂಗಣ್ಣ ತಂದೆ ಲಿಂಗಪ್ಪ ಸಾ.ಹಿರೇಬಾದರದಿನ್ನಿ ರವರು ಅ.೦೨ ರಂದು ಬೆಳಿಗ್ಗೆ ೫:೩೦ ಗಂಟೆಗೆ ನೀಡಿದ ದೂರಿನಲ್ಲಿ ಸಾಯಿರಾಮ್ ರವರ ಮಾಲೀಕತ್ವದಲ್ಲಿರುವ ಲಿಂಗಸುಗೂರು ತಾಲೂಕಿನ ಗರುಗುಂಟಾ ಗ್ರಾಮದ ೬ ಎಕರೆ ೩೭ ಗುಂಟೆ ಜಮೀನಿನಲ್ಲಿ ೩೨ ಗುಂಟೆ ಜಮೀನನ್ನು ವ್ಯಕ್ತಿಯ ಪತ್ನಿಯ ಮತ್ತು ತಮ್ಮನ ಹೆಸರಿನಲ್ಲಿ ಖರೀದಿ ಮಾಡಿದ್ದು, ಈ ಜಮೀನಿನ ೧೧(ಇ) ನಕ್ಷೆಗಾಗಿ ಅರ್ಜಿಯನ್ನು ಹಾಕಿದ್ದು, ಪ್ರವೀಣ್ ಕುಮಾರ ಭೂ ಮಾಪಕರು ಸರ್ವೆ ಇಲಾಖೆ ಲಿಂಗಸೂಗೂರು ರವರು ಈ ಜಮೀನು ಅಳತೆ ಮಾಡಿಕೊಂಡು ಹೋಗಿದ್ದು, ನಕ್ಷೆಯ ಕೆಲಸ ಮಾಡಿಕೊಡಲು ೨೦,೦೦೦ರೂ. ಗಳ ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುವ ದೂರಿನ ಮೇಲಿಂದ ಠಾಣಾ ಅಪರಾಧ ಸಂಖ್ಯೆ.೦೪/೨೦೨೩ ಕಲಂ ೭(ಎ) ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ ೧೯೮೮ ತಿದ್ದುಪಡಿ ೨೦೧೮ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ ಎಂದು ಕರ್ನಾಟಕ ಲೋಕಾಯುಕ್ತ, ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಅ.೦೨ ರಂದು ಸಂಜೆ ಪ್ರವೀಣ್ ಕುಮಾರ, ಭೂ ಮಾಪಕರು ರವರು ಟ್ರಾö್ಯಪ್ ಹಣ ೧೦,೦೦೦ರೂ.ಗಳ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಡಾ.ರಾಮ ಎಲ್ ಅರಸಿದ್ದಿ, ಕರ್ನಾಟಕ ಲೋಕಾಯುಕ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಠಾಣೆಯ ಅಧಿಕಾರಿಗಳಾದ ಹಣಮಂತರಾಯ, ಡಿವೈಎಸ್ಪಿ ಪಿಐ ಗಿರೀಶ್ ರೋಡಕರ್, ಚಂದ್ರಪ್ಪ ಈಟಿ, ಪಿಐ, ರಾಜೇಶ ಬಟಗುರ್ಕಿ ಪಿಐ ಹಾಗೂ ಸಿಬ್ಬಂದಿಯವರಾದ ಶಿವರಾಮಸ್ವಾಮಿ ಸಿಹೆಚ್ಸಿ , ವಿಜಯಕುಮಾರ್ ಸಿಹೆಚ್ಸಿ, ಗೋಪಾಲ್ ಪವರ ಸಿಹೆಚ್ಸಿ, ಏಕಾಂಬರನಾಥ ಸಿಹೆಚ್ಸಿ, ನರಸಪ್ಪ ಸಿಪಿಸಿ, ತಿಪ್ಪಣ ಸಿಪಿಸಿ, ಗೋಪಾಲ್ ಸಿಪಿಸಿ, ಚನ್ನವೀರ ಸಿಹೆಚ್ಸಿ, ಗಣೇಶ ಗೌಡ ಸಿಪಿಸಿ, ಶರಣಬಸವ ಎಪಿಸಿ, ಬಸಯ್ಯಸ್ವಾಮಿ ಎಪಿಸಿ ರವರುಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಆಪಾದಿತನನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ, ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.