“ಹಳೆ ಬೇರು ಹೊಸ ಚಿಗುರು ಕೂಡಿರಲು ಮನಸೊಬಗು” ಎಂಬ ಡಿ ವಿ ಜಿಯವರ ಮಾತಿನಂತೆ. ಇಂದಿನ ಯುವ ಪೀಳಿಗೆಗೆ ಪ್ರಾಚೀನ ಕಾಲದ ಕಲೆ ಸಂಸ್ಕೃತಿಯ ತಿಳುವಳಿಕೆ ಬಹಳ ಮುಖ್ಯ.
ಬಹಳಷ್ಟು ಜನರ ದೃಷ್ಟಿಯಲ್ಲಿ ಜನಪದ ಹಾಗೂ ಜನಪದದ ಆಚರಣೆಯನ್ನು ಮಾಡುವವರನ್ನು ಕಂಡರೆ ಕೀಳಾಗಿ ನೋಡುವ ಅಥವಾ ಮೂಡನಂಬಿಕೆ ಎಂದು ಬಿಂಬಿಸುವುದನ್ನು ಕಾಣುತ್ತೇವೆ ಆದರೆ ವಿಜ್ಞಾನದ ಉಗಮವು ಜನಪದದ ಕಲೆ ಸಂಸ್ಕೃತಿ ಆಧಾರದ ಮೇಲೆ ನಡೆದಿದೆ. ಕಲೆ ಅಥವಾ ಜನಪದ ಕಲೆ ಎಂಬುದು ಜೀವಿಗಳ ಜೀವಾಳ.