ಮಸ್ಕಿ : ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಡಾ|| ಎನ್ ಮೂರ್ತಿ ಸ್ಥಾಪಿತ) ಯ ಜಿಲ್ಲಾ ಅಧ್ಯಕ್ಷರಾದ ಅಶೋಕ ನಂಜಲದಿನ್ನಿ ಇವರ ಅಧ್ಯಕ್ಷತೆಯಲ್ಲಿ ಪೂರ್ವ ಸಭೆಯು ನಡೆಸಲಾಯಿತು.
ನಂತರ ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು ದಿನಾಂಕ 09/09/2024 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುವ ಪ್ರತಿಭಟನೆಯು ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಮುಂದಿನ ನಮ್ಮ ಜನಾಂಗದ ಭವಿಷ್ಯಕ್ಕಾಗಿ ಹೋರಾಟ ನಡೆಯುತ್ತಿರುವುದರಿಂದ ಜಿಲ್ಲೆಯ ಸಮಸ್ತ ಸಂಘಟನೆಯ ಜಿಲ್ಲಾ ಮತ್ತು ತಾಲೂಕ ಮುಖಂಡರು ಹಾಗೂ ಎಲ್ಲಾ ಹೋಬಳಿ ಘಟಕಗಳ ಅಧ್ಯಕ್ಷರುಗಳು,ಪದಾಧಿಕಾರಿಗಳು,ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳವುದರ ಮೂಲಕ ಈ ಹೋರಾಟವನ್ನು ಯಶಸ್ವಿ ಮಾಡೋಣ ಎಂದು ತಿಳಿಸಿದರು.
ಇದೇ ಸಂದರ್ಭದ ಈ ಸಭೆಯಲ್ಲಿ DSS ತಾಲ್ಲೂಕು ಅಧ್ಯಕ್ಷರಾದ ಜಮದಗ್ನಿ ಗೋನಾಳ,ತಾಲ್ಲೂಕು ನಗರ ಘಟಕದ ಅಧ್ಯಕ್ಷರಾದ ಮಲ್ಲಿಕ್ ಮುರಾರಿ,ಮಸ್ಕಿ ತಾಲ್ಲೂಕು ಉಪಾಧ್ಯಕ್ಷರಾದ ಮೌನೇಶ ಮೇದಿಕಿನಾಳ,ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಮರಿಸ್ವಾಮಿ ಮುದಬಾಳ,ಅನಿಲ್ ಕುಮಾರ್ ಮುದಬಾಳ,ಸಿದ್ದಪ್ಪ ಉದ್ಬಾಳ,ಶ್ರೀಕಾಂತ್ ಚಿಕ್ಕ ಕಡಬೂರು,ಸುಭಾಷ ಹಿರೇಕಡಬೂರು,ಸಾಯಿಬಾಬು ಗೋನಾಳ,ರಾಹುಲ್ ಮಸ್ಕಿ,ರವಿಕುಮಾರ್,ಸಾಯಿ ಬಾಬು,ಚನ್ನಬಸವ ಯದ್ದಲದಿನ್ನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಎಚ್ ಕೆ ಬಡಿಗೇರ್