ಬಡವರ ಬಾರುಕೋಲು ಸುದ್ದಿ
ಮಸ್ಕಿ : ತಾಲೂಕಿನ ಮೆದಕಿನಾಳ,ಹಾಲಾಪೂರು,ಕೋಳಬಾಳ ಗ್ರಾಮ ಪಂಚಾಯತಿ ಮಟ್ಟದಲ್ಲಿ NRLM ಸಂಜೀವಿನಿ ಒಕ್ಕೂಟಗಳಿಂದ ಅಭಿಯಾನ ಆಂದೋಲನ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸ್ವ ಸಹಾಯ ಗುಂಪಿನ
ಮಹಿಳೆಯರಿಗೆ ಲಿಂಗತ್ವ ಕುರಿತು ಕಾನೂನು ಸಲಹೆಗಾರರಿಂದ ಮಾಹಿತಿ ನೀಡಿ ಮಹಿಳೆಯರನ್ನು ಸಬಲೀಕರಣಗೋಳಿಸುವ ಕುರಿತು ಹಾಗೂ ಅವರು ಸಾವಲಂಬಿ ಜೀವನ ನಡೆಸಲು ಮಹಿಳೆಯರು ಮುಂದೆ ಬರಲು ಮಾಹಿತಿ ತಿಳಿಸಲಾಯಿತು. ಮಕ್ಕಳಿಂದ ಜಾಥ,ಕಿಶೋರಿಯರಿಂದ ಪ್ರಬಂಧ ಸ್ಪರ್ಧೆ,ಗುಂಪಿನ ಮಹಿಳೆಯರಿಂದ ರಂಗೋಲಿ ಸ್ಪರ್ದೆ ಆಯೋಜಿಸಲಾಗಿತ್ತು ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ತಾಲೂಕ ಪಂಚಾಯತಿ NRLM ಸಿಬ್ಬಂದಿಗಳಾದ ತಾಲೂಕ ವ್ಯವಸ್ಥಾಪಕರಾದ ಮೌನೇಶ,ವಲಯ ಮೇಲ್ವಿಚಾರಕ ಪ್ರಕಾಶ ಹಾಗೂ ಕೋಳಬಾಳ,ಹಾಲಾಪೂರು,ಮೆದಕಿನಾಳ ಗ್ರಾಮ ಪಂಚಾಯತಿಯ MBK,LCRP ಕೃಷಿ ಸಖಿ,ಪಶು ಸಖಿ ಹಾಗೂ ಸ್ವ ಸಹಾಯ ಗುಂಪಿನ ಮಹಿಳೆಯರು ಭಾಗಿಯಾಗಿದ್ದರು.
ವರದಿ : ಎಚ್.ಕೆ.ಬಡಿಗೇರ್
11ನೇ ವರ್ಷದ ಶ್ರೀ ಗಣೇಶಗಾಯಿತ್ರಿ ಮಾತೆಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಶ್ರೀ ಸದಾನಂದ ಶ್ರೀಗಳಿಂದ ಆಹ್ವಾನ