ಏಪ್ರಿಲ್ 07. ಸಿಂಧನೂರು ರಾಜ್ಯದ್ಯಂತ ಇಂದು ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅವರ ವಿರಂ ಸಿನಿಮಾದ ಪ್ರಚಾರವನ್ನು ಪ್ರಜ್ವಲ್ ದೇವರಾಜ್ ಅಭಿಮಾನಿಗಳು ನಗರದ ಶ್ರೀ ಮಂಜುನಾಥ ಚಿತ್ರಮಂದಿರದಲ್ಲಿ ನಡೆಸಿದರು.
ಸಾಕಷ್ಟು ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿರುವುದು ಸಂತಸದ ವಿಷಯ ಮುಂದಿನ ದಿನಗಳಲ್ಲಿ ಇನ್ನ ದೊಡ್ಡ ದೊಡ್ಡ ಸಿನಿಮಾಗಳನ್ನು ನಮ್ಮ ಅಣ್ಣ ಮಾಡಲಿ ಒಳ್ಳೆಯ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು
ನಂತರ ಮಾತನಾಡಿದ ಅಭಿಮಾನಿಗಳು ನಮ್ಮ ನಾಯಕ ನಟ ತುಂಬಾ ಕೋಪದ, ಅನ್ಯಾಯದ ವಿರುದ್ದ ಸಿಡಿದು ನಿಲ್ಲುವಂಥ, ಆ್ಯಕ್ಷನ್ ಇಮೇಜ್ ನ ಪಾತ್ರವಿದು’ ವೀರಂ ಸಿನಿಮಾದಲ್ಲಿ ಸಾಮಾನ್ಯ ಹುಡುಗನೊಬ್ಬನ ವೀರಾವೇಶವಿದೆ. ಇದೊಂದು ಆ್ಯಕ್ಷನ್ ಸಬ್ಜೆಕ್ಟ್ ಆಗಿರುವುದರಿಂದ, ಭರ್ಜರಿ ಆ್ಯಕ್ಷನ್ಗಳಿರುವುದಂತೂ ನಿಜ ಇಡೀ ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಆ್ಯಕ್ಷನ್ ಇದೆ. ಅದರ ಜೊತೆಗೆ ಫ್ಯಾಮಿಲಿ, ಸೆಂಟಿಮೆಂಟ್, ಲವ್. ಫ್ರೆಂಡ್ಶಿಪ್, ಕಾಮಿಡಿ, ಎಮೋಶನ್ಸ್ ಎಲ್ಲವೂ ಇದೆ. ಒಟ್ಟಾರೆ ಹೇಳುವುದಾದರೆ, “ವೀರಂ’ ಒಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಇರುವಂಥ ಪಾತ್ರ’ ಎನ್ನುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ “ವೀರಂ’ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದು, ನಟ ಶ್ರೀನಗರ ಕಿಟ್ಟಿ ನಾಯಕನ ಅಣ್ಣನಾಗಿ, ಶಿಷ್ಯ ದೀಪಕ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟಿ ಶ್ರುತಿ, ಅಚ್ಯುತ ಕುಮಾರ್, ಬಲರಾಜವಾಡಿ, ಗಿರೀಶ್ ಶಿವಣ್ಣ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಶಶಿಧರ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಶಶಿಧರ್ ನಿರ್ಮಿಸಿರುವ “ವೀರಂ’ ಸಿನಿಮಾಕ್ಕೆ ಖದರ್ ಕುಮಾರ್ ನಿರ್ದೇಶನವಿದೆ. ಅಂದಹಾಗೆ, ವೀರಂ ಇಂದು ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗಿದೆ
ಈ ಸಂದರ್ಭದಲ್ಲಿ ರವಿ ಸಿಂಧನೂರು ಇವರ ವತಿಯಿಂದ ಮೊದಲನೇ ಬಾರಿಗೆ ರಾಜ್ರತ್ನ ಕನ್ನಡ ಯುವ ಸಮಿತಿ ಹಾಗೂ ಅಪ್ಪು ಯೂತ್ ಬ್ರಿಗೇಡ್ ಸಿಂಧನೂರು ಇವರಿಂದ ಅದ್ದೂರಿಯಾಗಿ ಪ್ರಮೋಷನ್ ಮಾಡಲಾಯಿತು ಕಾಳಪ್ಪ. ಬಸವರಾಜ್. ಬಸವನಗೌಡ ಪಾಟೀಲ್. ಶಿವು ಎಸ್ ಆರ್ ಕೆ Manju. D ಸಿಂಧನೂರು ಇದ್ದರು