ಸಿಂಧನೂರು ಜಿಲ್ಲಾ 21 . ನಗರದ ನೋಬೆಲ್ ಪದವಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ 2023 24 ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಮಾಡಶಿರುವಾರ ಗ್ರಾಮದಲ್ಲಿ ಉದ್ಘಾಟನೆ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಊರಿನ ಹಿರಿಯರು ಮತ್ತು ಬಸವ ಚಾರಿಟೇಬಲ್ ಟ್ರಸ್ಟಿನ ಧರ್ಮದರ್ಶಿಗಳಾದ ಸಿದ್ದರಾಮಪ್ಪ ಮಾಡಶಿರುವಾರ ಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುವರ್ಣ ಗಿರಿ ವಿರಕ್ತಮಠ ಗೆದ್ದಲು ದೊಡ್ಡಿಯ ಪರಮಪೂಜ್ಯರಾದ ಮಹಾಲಿಂಗ ಸ್ವಾಮಿಗಳು ವಹಿಸಿ ಮಾತನಾಡುತ್ತಾ ಎನ್ಎಸ್ಎಸ್ ವಿದ್ಯಾರ್ಥಿ ಜೀವನದಲ್ಲಿ ಬಹಳ ಬದಲಾವಣೆ ತರುವಂತಹ ಒಂದು ಘಟ್ಟ ಈ ಶಿಬಿರದಲ್ಲಿ ಭಾಗವಹಿಸಿದಂತ ಮಕ್ಕಳಲ್ಲಿ ಬದಲಾವಣೆಯ ತಿರುವ ಮೂಡುತ್ತದೆ ಅಂದರೆ ಮಕ್ಕಳು ಪಠ್ಯದ ಜೊತೆಗೆ ಸಾಮಾಜಿಕ ಸೇವಾ ಮನೋಭಾವವನ್ನ ಬೆಳೆಸಿಕೊಳ್ಳುತ್ತಾ ಸಮಾಜದ ಸಾಮರಸ್ಯವನ್ನು ಕಾಪಾಡುವಲ್ಲಿ ಈ ದೇಶದ ಶಕ್ತಿಗಳಾಗಿ ತಾವು ರೂಪುಗೊಳ್ಳುತ್ತೀರಿ ಅಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವದ ವಿಕಾಸನ ಇಂತಹ ಎನ್ಎಸ್ಎಸ್ ಕಾರ್ಯಕ್ರಮಗಳಿಂದ ಸಾಧ್ಯ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವಂತ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಕ್ಕೆ ಪ್ರಪಂಚನೆಯ ವ್ಯಕ್ತಪಡಿಸಿದರು
ಧ್ವಜಾರೋಹಣವನ್ನು ನೆರವೇರಿಸಿ ಸಿದ್ದರಾಮಪ್ಪ ಮಾಡಶಿರುವಾರ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಶಿಸ್ತು ಶ್ರದ್ಧೆ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಲು ನೆರವಾಗುತ್ತದೆ ಊರಿನ ಎಲ್ಲಾ ಜನರ ಸಹಕಾರ ಸಿಗುತ್ತೆ ಜೊತೆಗೆ ಹಳ್ಳಿಯ ಗ್ರಾಮೀಣ ಸಂಸ್ಕೃತಿಯ ಸೊಗಡುನ್ನ ತಾವೆಲ್ಲರೂ ಅನುಭವಿಸಿ ಜೊತೆಗೆ ಪರಿಸರವನ್ನ ಕಾಪಾಡುವಲ್ಲಿ ತಮ್ಮ ಪಾತ್ರ ಬಹಳ ದೊಡ್ಡದು ಎಂದು ಪ್ರಸಂಶೆನಿಯ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮದ ಹಿರಿಯರಾದ ನಿರುಪಾದಯ್ಯ ಸ್ವಾಮಿಗಳು ಮಾತನಾಡುತ್ತಾ ಇವತ್ತಿನ ಮಕ್ಕಳೇ ನಾಳಿನ ನಾಗರಿಕರು ಇಂತಹ ಮಕ್ಕಳು ನಮ್ಮೂರಿಗೆ ಬಂದು ನಮ್ಮಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಿ ನಮಗೆ ಪರಿಸರ ಪ್ರಜ್ಞೆಯನ್ನು ಮೂಡಿಸುತ್ತಾರೆ ಅಂತಹ ಖುಷಿಯಾದ ಸಂದರ್ಭದಲ್ಲಿ ನಾವೆಲ್ಲರೂ ಭಾಗವಹಿಸೋಣ ಅಷ್ಟೇ ಅಲ್ಲ ಈ ಪರಿಸರವನ್ನ ಕಾಪಾಡೋದು ನಮ್ಮೆಲ್ಲರ ಕರ್ತವ್ಯ ಎಂದು ಮತ್ತು ಕಾರ್ಯಕ್ರಮ ಮುಗಿಯುವವರೆಗೂ ನಮ್ಮ ಗ್ರಾಮದ ಎಲ್ಲಾ ರೀತಿಯಿಂದ ಸಹಕಾರ ಇರುತ್ತೆ ಎಂದು ತಮ್ಮ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಎನ್ಎಸ್ಎಸ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅರುಣ್ ಕುಮಾರ್ ಬೇರ್ಗೆ ಮಾತನಾಡುತ್ತಾ ಎನ್ಎಸ್ಎಸ್ ವಿದ್ಯಾರ್ಥಿಗಳು ಶಿಬಿರದಲ್ಲಿ ಕೇವಲ ಗ್ರಾಮೀಣ ಜನರಿಗೆ ಬೋಧನೆ ಮಾಡಲು ಬಂದಿಲ್ಲ ಅದರೊಟ್ಟಿಗೆ ಅವರಿಂದ ಹೊಸದೊಂದನ್ನು ಕಲಿತು ಬದುಕಿನಲ್ಲಿ ಅಳವಡಿಸಿಕೊಂಡು ಪ್ರಜ್ಞಾವಂತ ಈ ದೇಶದ ನಾಗರಿಕರಾಗಲು ಈ ಎನ್ ಎಸ್ ಎಸ್ ನೆರವಾಗುತ್ತದೆ ಅಂತಹ ವ್ಯಕ್ತಿತ್ವವನ್ನ ರೂಪಿಸಿಕೊಳ್ಳಲು ತಾವು ಸದಾ ಜಾಗೃತವಾಗಿರಬೇಕು ಹಾಗೂ ಸಾಮಾಜಿಕ ಸೇವಾ ಮನೋಭಾವವನ್ನ ಮತ್ತು ಪರಿಸರ ಪ್ರಜ್ಞೆಯನ್ನು ಸಮಯಪ್ರಜ್ಞೆಯನ್ನು ಬೆಳೆಸಿಕೊಂಡಿದ್ದೆ ಆದಲ್ಲಿ ಜೀವನದ ಅತ್ಯಂತ ಮೇಲ್ ಪಂಕ್ತಿಯಲ್ಲಿ ಬದುಕನ್ನ ಕಟ್ಟಿಕೊಳ್ಳುತ್ತೀರಿ ಎಂದು ಗ್ರಾಮದ ಜನರ ಸಹಕಾರವನ್ನು ನೆನೆದರು. ಕಾರ್ಯಕ್ರಮದ ಮುನ್ನುಡಿಯ ಮಾತುಗಳನ್ನ ಎನ್ಎಸ್ಎಸ್ ಅಧಿಕಾರಿಗಳಾದ ಹೊನ್ನಪ್ಪ ಬೆಳಗುರ್ಕಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಪರಶುರಾಮ್ ಮಲ್ಲಾಪುರವರು ಮಾತನಾಡುತ್ತಾ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಈಗಾಗಲೇ ಕಳೆದ ವರ್ಷ ಗೊರೆಬಲ್ ಗ್ರಾಮದಲ್ಲಿ ಶಿಬಿರವನ್ನ ಆಯೋಜಿಸಿ ಅತ್ಯುತ್ತಮ ಏನ್ ಎಸ್ ಎಸ್ ತಂಡ ಎಂದು ವಿಶ್ವವಿದ್ಯಾಲಯದಿಂದ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೆಯೇ ಅದಕ್ಕಿಂತಲೂ ಹೆಚ್ಚಿನ ಒಂದು ಶ್ರಮ ಹಾಕಿ ಈ ಸಾರಿಯ ಶಿಬಿರವನ್ನು ಅತ್ಯುತ್ತಮವಾಗಿ ಯಶಸ್ವಿ ಆಗುತ್ತೆ ಇದಕ್ಕೆ ಗ್ರಾಮದ ಜನತೆ ಸಹಕಾರ ನೀಡಬೇಕೆಂದು ಕೋರಿದರು ಅಷ್ಟೇ ಅಲ್ಲ ಎನ್ಎಸ್ಎಸ್ ಇಡೀ ದಿನದ ಕ್ರಿಯಾ ಯೋಜನೆಯನ್ನು ಅವರು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಪದ್ಮಾವತಿ ದಾಸರ ನಿರುಪಾದಿ ಕತ್ತಿಗೆ ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಬಡವರ ಬಾರಕೋಲು ಕನ್ನಡ ಪ್ರಾಕ್ಸಿಕ ಪತ್ರಿಕೆ ಮತ್ತು ಟಿವಿ ಚಾನಲ್ ಪ್ರಧಾನ ಸಂಪಾದಕರು ಹಾಗೂ ವ್ಯವಸ್ಥಾಪಕರಾದ ಎಸ್ ಎಸ್. ಜಿನೂರ್ ಹಾಗೂ ಉಪನ್ಯಾಸಕರಾದ ಮೌಲಸಾಬ್ ಬಸುರಾಜ್ ಬಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ದಳವಾಯಿ ಹಾಗೂ ಉಪನ್ಯಾಸಕರಾದ ಅಮರಯ್ಯ ಸ್ವಾಮಿ ಡಾ. ಮಲ್ಲಿಕಾರ್ಜುನ್ ಕಮತ್ತಿಗೆ ವೆಂಕೋಬ ಬೂದಿಹಾಳ ಜಗದೀಶ್ ಶಿವಕುಮಾರ್ ಕುಮಾರಿ ಜ್ಯೋತಿ ಸುರೇಶ್ ಮುಳ್ಳೂರು ವಿಶ್ವನಾಥ್ ಉಪಸ್ಥಿತ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಚನ್ನಬಸಮ್ಮ ಇಂಗ್ಲಿಷ್ ಉಪನ್ಯಾಸಕರು ನೆರವೇರಿಸಿದರು ಸ್ವಾಗತವನ್ನು ಶ್ರೀಮತಿ ಶಾಂತ ಪಾಟೀಲ್ ಹಾಗೂ ಪ್ರಾರ್ಥನೆಯನ್ನು ಅಕ್ಕಮಹಾದೇವಿ ಬಾಗಲವಾಡ ನೆರವೇರಿಸಿದರು ಮತ್ತು ದೌಲಸಾಬ್ ಉಪನ್ಯಾಸಕರು ವಂದಿಸಿದರು