ಮಸ್ಕಿ : ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿ ಮಸ್ಕಿ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಜಯಂತಿ ಆಚರಣೆಯ ಸಂದರ್ಭದಲ್ಲಿ ಪ್ರತಾಪ್ ಗೌಡ ಪಾಟೀಲ ಮಾತನಾಡಿ ರಾಮಾಯಣ,ಮಹಾಭಾರತ ಮಹಾಕಾವ್ಯಗಳು ಎಲ್ಲ ಕಾಲಘಟ್ಟ,ಪೀಳಿಗೆಗೆ ಅನ್ವಯವಾಗುತ್ತವೆ.
ಹಾಗಾಗಿ ಮನುಷ್ಯ ಅಳಿದರೂ ಈ ಮಹಾಕಾವ್ಯಗಳು ಅಳಿಯುವುದಿಲ್ಲ ಎಂದು ಹೇಳಿದರು ಅಲ್ಲದೆ ಮಹರ್ಷಿ ವಾಲ್ಮೀಕಿ ಅವರು ಪ್ರಪಂಚದಲ್ಲಿರುವ ಎಲ್ಲ ದೇಶಗಳಲ್ಲೂ ಮಹಾಕಾವ್ಯಗಳು ಸೃಷ್ಟಿಯಾಗಿಲ್ಲ.ಗ್ರೀಕ್,ರೋಮ್ ಬಿಟ್ಟರೆ ನಮ್ಮ ದೇಶದಲ್ಲೇ ಮಹಾಕಾವ್ಯಗಳು ಕಾಣಿಸಿಕೊಳ್ಳಲು ಸಾಧ್ಯ. ರಾಮಾಯಣ,ಮಹಾಭಾರತ ಕಾವ್ಯಗಳು ಕಟ್ಟಿಕೊಡುವ ದೃಷ್ಟಿಕೋನಗಳೇ ಬೇರೆ.ಈ ಮಹಾಕಾವ್ಯಗಳು ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿನಿಧಿಸುವ ಕೃತಿಗಳಾಗಿವೆ
ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಶರಣಯ್ಯ ಸ್ವಾಮಿ ಸೊಪ್ಪಿಮಠ,ಪುರಸಭೆಯ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಮಸ್ಕಿ ಪಕ್ಷದ ಹಿರಿಯ ಮುಖಂಡರಾದ ಡಾಕ್ಟರ್ ಬಿ.ಎಚ್.ದಿವಟರ್,ರವಿಗೌಡ,ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ
ಯಲ್ಲೋಜಿ ರಾವ್ ಕೋರೇಕರ್,ರಾಜ್ಯ ಎಸ್ಟಿ ಮೋರ್ಚ ಕಾರ್ಯಕಾರಿ ಸದಸ್ಯರಾದ ಜಿ ವೆಂಕಟೇಶ ನಾಯಕ,ಸೂಗಣ್ಣ ಬಾಳೆಕಾಯಿ,ಪ್ರಸನ್ ಪಾಟೀಲ್,ಭರತ್ ಶೇಠ್ ಪುರಸಭೆ ಸದಸ್ಯರು,ಶರಣೇಗೌಡ,ಬಸವರಾಜ್ ಬಕ್ಕಣ್ಣ,ರಮೇಶ್ ಗುಡಿಸಲಿ,ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷರಾದ ಅಜ್ಮೀರ್,ಶಾಮಿದ್,ಕೇಶವಮೂರ್ತಿ,ಆರ್.ಕೆ.ನಾಯಕ,ಚಂದ್ರಶೇಖರ ನಾಯಕ,ಎರ್ರಿಸ್ವಾಮಿ ಅಂಗಡಿ,ವೆಂಕಟೇಶ್ ಗುಡಿಸಲಿ,ದೇವಪ್ಪ ಗೋನ್ವಾರ್,ಯಮನೂರು ಗೌಡಸೇರಿದಂತೆ ವಿವಿಧ ಮೋರ್ಚಾದ ಪದಾಧಿಕಾರಿಗಳು,ಪುರಸಭೆಯ ಸದಸ್ಯರು,ಪಕ್ಷದ ಮುಖಂಡರು,ಯುವಕರು,ಕಾರ್ಯಕರ್ತರು ಇನ್ನೂ ಅನೇಕ ಯುವ ಮಿತ್ರರು,ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಈ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ : ಎಚ್.ಕೆ.ಬಡಿಗೇರ್