ಆಗಸ್ಟ್ 28 ಮಸ್ಕಿ : ಪಟ್ಟಣದ ಪುರಸಭೆಯಲ್ಲಿ ನಡೆದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುವುದರ ಮೂಲಕ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆಯ ಸಭಾಂಗಣದಲ್ಲಿ ತಾಲೂಕ ದಂಡಾಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳಾದ ಡಾ.ಮಲ್ಲಪ್ಪ.ಕೆ.ಯರಗೋಳ ಅವರ ಉಪಸ್ಥಿತಿಯಲ್ಲಿ ಹಿಂದುಳಿದ ವರ್ಗ( ಎ )ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ತಂದೆ ಅಮರಪ್ಪ ವಾರ್ಡ್ ನಂ 12 ಕುರುಬರ ಓಣಿ,ಹಾಗೂ ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೀತಮ್ಮ ಗಂಡ ಶಿವರಾಜ ಬುಕ್ಕಣ್ಣ ವಾರ್ಡ್ ನಂ 15 ಪಿಂಜಾರ ಓಣಿ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾದರು ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಗೆ ಗೆಲುವಿನ ಪ್ರಮಾಣ ಪತ್ರ ನೀಡುವ ಮೂಲಕ ಶುಭಾಶಯಗಳನ್ನು ಕೋರಿದರು.
ಒಟ್ಟು 23 ಸದಸ್ಯರ ಸಂಖ್ಯಾ ಬಲದಲ್ಲಿ ಬಿಜೆಪಿಯು 14 ಜನ ಸದಸ್ಯರ ಬಲ ಹೊಂದಿದ್ದರಿಂದ ಬಹುಮತ ಇರುವ ಬಿಜೆಪಿಯು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳನ್ನು ತಮ್ಮ ತೆಕ್ಕೆಗೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿತು.
ಬಿಜೆಪಿ 14 ಜನ ಸದಸ್ಯರ ಬಲದೊಂದಿಗೆ ಗೆಲುವು ಸರಳವಾಗಿತ್ತು.ಆದರೆ ಕಾಂಗ್ರೆಸ್,ಶಾಸಕರ,ವಿಧಾನ ಪರಿಷತ್ ಸದಸ್ಯರ,ಸಂಸದರ ಬೆಂಬಲದ ನಿರೀಕ್ಷೆ ಇದ್ದರು ಸಹ ಇನ್ನೂ ಮೂರು ಸದಸ್ಯರ ಕೊರತೆ ಇದ್ದುದ್ದರಿಂದ ಬಹುಮತ ಸಿಗುವ ಸಾಧ್ಯತೆ ಕಡಿಮೆಯಾಗಿತ್ತು ಆದ್ದರಿಂದ ಈ ಒಂದು ಕಣದಿಂದ ಹಿಂದೆ ಸರಿಯುವ ಮೂಲಕ ಬಿಜೆಪಿಗೆ ಹಾದಿ ಸುಗಮವಾಯಿತು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಬೆಂಬಲವಾಗಿ ಮಸ್ಕಿ ಪುರಸಭೆಯ ಚುನಾಯಿತ ಬಿಜೆಪಿಯ ಸರ್ವ ಸದಸ್ಯರು,ಮಾಜಿ ಶಾಸಕರು ಹಾಗೂ ಜನಪ್ರಿಯ ನಾಯಕರಾದ ಪ್ರತಾಪ್ ಗೌಡ ಪಾಟೀಲ್,ಪಕ್ಷದ ಹಿರಿಯ ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್,ಅಪ್ಪಾಜಿ ಗೌಡ ಪಾಟೀಲ್,ಡಾಕ್ಟರ್ ಬಿ.ಎಚ್. ದಿವಟರ,ಡಾಕ್ಟರ್ ಶಿವಶರಣಪ್ಪ ಇತ್ಲಿ,ರಾಜ ನಾಯಕ,ಬಸವರಾಜ ಸ್ವಾಮಿ ಹಸಮಕಲ್,ಪ್ರಸನ್ನ ಪಾಟೀಲ್,ಡಾಕ್ಟರ್ ಪಂಚಾಕ್ಷರಯ್ಯ ಸ್ವಾಮಿ,ಕರಿಬಸಯ್ಯಸ್ವಾಮಿ,ಶ್ರೀನಿವಾಸ್ ಈಲ್ಲೂರು,ಅಶೋಕ್ ಠಾಕೂರ್,ಡಾ.ನಾಗನಗೌಡ,ಅಭಿಜಿತ್ ಮಾಲಿ ಪಾಟೀಲ್,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಉದ್ಬಾಳ,ಬಸವರಾಜ ಗುಡಿಹಾಳ,ಮಂಡಲ ಕಾರ್ಯದರ್ಶಿಯಾದ ಡಾ.ವೆಂಕಟೇಶ್, ಕೋಳಬಾಳ,ಶಾಂತಮ್ಮ ಧನ್ ಶೆಟ್ಟಿ,ಉಮಾ ಗಿಡದ,ವಿವಿಧ ಮೋರ್ಚಗಳ ಅಧ್ಯಕ್ಷರಾದ ಎಸ್ ಟಿ ಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ ಮೌನೇಶ್ ನಾಯಕ,ಚಂದ್ರಕಲಾ ದೇಶಮುಖ್,ಅಜ್ಮೀರ್,ಪಂಪಾಪತಿ ಹೂವಿನ ಬಾವಿ,ಲಕ್ಷ್ಮೀನಾರಾಯಣ ಶೆಟ್ಟಿ,ಶರಣಪ್ಪ ಹುಲ್ಲೂರು,ಶ್ರೀಧರಗೌಡ ಹೀರೆಕಡಬೂರು,A D ಉದಗಟ್ಟಿ,ಆದಯ್ಯ ಸ್ವಾಮಿ ಕ್ಯಾತ್ನಟ್ಟಿ,ಸಿದ್ದಲಿಂಗಯ್ಯ ಸೊಪ್ಪಿಮಠ,ಯಮುನಪ್ಪ ಭೋವಿ,ಸಿದ್ದನಗೌಡ ಉದ್ಬಾಳ್,ಮಸೂದ್ ಪಾಷಾ,ಶರಣೆಗೌಡ ಪೊಲೀಸ್ ಪಾಟೀಲ್,ಪಂಪಣ್ಣ ಮಡಿವಾಳ,ಬಸವರಾಜ ಚಿಕ್ಕಕಡಬೂರು,ಶರಣಬಸವ ಅರವಿ,ಸಂತೋಷ ಬಳಿಗಾರ,ಸುರೇಶ ಪತ್ತಾರ ಹಾಗೂ ಮಲ್ಲಯ್ಯ ಅಂಬಾಡಿಯವರ ಸುತ್ತ ಮುತ್ತಲಿನ ಗ್ರಾಮಗಳ ಸಂಬಂಧಿಕರು,ಅಪಾರ ಅಭಿಮಾನಿಗಳು ಪಕ್ಷದ ಮುಖಂಡರು,ಪದಾಧಿಕಾರಿಗಳು,ಕಾರ್ಯಕರ್ತರು ಈ ಸಡಗರ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ : ಹೆಚ್. ಕೆ. ಬಡಿಗೇರ್