ಏಪ್ರಿಲ್ 14 ರಾಜ್ಯದಲ್ಲಿ ಮೇ 10 ವಿಧಾನಸಭೆ ಚುನಾವಣೆ ನಡೆಯಲಿದ್ದು ಎಲ್ಲಾ ಪಕ್ಷಗಳಲ್ಲೂ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷಾಂತರ ಮಾಡುವುದು ಮುನಿಸಿಕೊಳ್ಳುವುದು ಜೋರಾಗಿ ನಡೆದಿದೆ ಅದೇ ರೀತಿ ಬೆಳಗಾವಿಯ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಾಯಕ ಮಾಜಿ ಉಪ ಮುಖ್ಯಮಂತ್ರಿ ಮತ್ತು ಮಾಜಿ ಸಾರಿಗೆ ಇಲಾಖೆ ಸಚಿವರಾದ ಲಕ್ಷ್ಮಣ ಸವದಿ ಮುನಿಸಿಕೊಂಡು ಬಿಜೆಪಿಗೆ ಗುಡ್ ಬಾಯ್ ಹೇಳಿದ್ದಾರೆ.
ಲಕ್ಷ್ಮಣ ಸವದಿ ಬೇಸತ್ತು ಮಾತಾಡಿದ ಮಾತುಗಳು
ನನಗೆ ಹೈಕಮಾಂಡ್ ವಹಿಸಿದ ಕೆಲಸವನ್ನು ಚಾಚು ತಪ್ಪದೇ ಪ್ರಮಾಣಿಕ ಮತ್ತು ನಿಯತ್ತಾಗಿ ಕೆಲಸ ನಿರ್ವಹಿಸಿದ್ದೇನೆ ಆದರೆ ನನ್ನ ಪ್ರಾಮಾಣಿಕತೆಗೆ ಮತ್ತು ನಿಯತ್ತಿಗೆ ಅವರು ಎಳ್ಳು ಕಾಳಷ್ಟು ಬೆಲೆ ಕೊಟ್ಟಿಲ್ಲ ಇದನ್ನು ನೋಡಿದರೆ ನನ್ನ ನಿಯತ್ತು ಮತ್ತು ಪ್ರಮಾಣಿಕತೆ, ನನಗೆ ಮುಳ್ಳಾಯಿತು.
ಬಿಜೆಪಿ ಪಕ್ಷ ತನ್ನ ನೀತಿ ನಿಯಮಗಳನ್ನು ಮತ್ತು ಸಿದ್ಧಾಂತಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ ಎಂದು ಮಾತಿಗಷ್ಟೇ ಹೇಳುತ್ತಾರೆ ನನ್ನ ವಿಷಯದಲ್ಲಿ ಆ ನೀತಿ ನಿಯಮಗಳು ಆ ಸಿದ್ಧಾಂತಗಳು ಎಲ್ಲಿ ಹೋದವು ಎಂದು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.
ನನ್ನನ್ನು ಉಪಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದಕ್ಕೆ ನಾನು ಬಹಳ ಖುಷಿಯಿಂದ ಪ್ರಮಾಣವಚನವನ್ನು ಸ್ವೀಕರಿಸಿದೆ ಆದರೆ ನಮ್ಮ ನಾಯಕರು ಉಪಮುಖ್ಯಮಂತ್ರಿ ಸ್ಥಾನವನ್ನು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತ ಮಾಡಿ ಆ ಒಬ್ಬ ಉಪ ಮುಖ್ಯಮಂತ್ರಿಗೆ ಇರುವಂತಹ ಗಾಡ್ ಫಾದರ್ ಆಫ್ ಹಾನರ್ ಸೌಲಭ್ಯವನ್ನು ಕಿತ್ತುಕೊಂಡರು ಜೊತೆಗೆ ಮೂರು ತಿಂಗಳಾದರೂ ನನಗೆ ಮನೆ ಸಿಗಲಿಲ್ಲ ಪಕ್ಷದಲ್ಲಿರುವ ಕೆಲವು ನಾಯಕರು ಬಹಳಷ್ಟು ತೊಂದರೆ ಕೊಟ್ಟಿದ್ದಾರೆ ಬಹಳಷ್ಟು ನೋವನ್ನು ಅನುಭವಿಸಿದ್ದೇನೆ ಹೀಗಾಗಿ ಬಿಜೆಪಿಗೆ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.