ಸಿಂಧನೂರು ಜುಲೈ 24.ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯ ಕಾರ್ಯ ಸೋಮಣ್ಣ ಸುಕಲಪೇಟೆ ನೇತೃತ್ವದಲ್ಲಿ, ನಿರ್ಗಮಿತ ಅದ್ಯಕ್ಷರಾದ ವೀರಭದ್ರಪ್ಪ ಹಂಚಿನಾಳ,ಶ್ರೀ ಕಾಳಿಕಾದೇವಿ ದೇವಸ್ಥಾನದ ಗೌರವ ಅದ್ಯಕ್ಷರಾದ ಶಂಕ್ರಪ್ಪ ಸಾಹುಕಾರ ತಿಡಿಗೋಳ,ಶ್ರೀ ಕಾಳಿಕಾದೇವಿ ದೇವಸ್ಥಾನದ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ ಬಡಿಗೇರ, ತಾಲೂಕಿನ ವಿಶ್ವಕರ್ಮ ಹಿರಿಯ ಮುತ್ಸದ್ದಿಗಳಾದ ವೀರೇಶ ದೇವರಗುಡಿ ಅವರ ಉಪಸ್ಥಿತಿಯಲ್ಲಿ ಅವರ ಸಲಹೆ ಮೇರೆಗೆ ಇಂದು ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಸಿಂಧನೂರು ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅದ್ಯಕ್ಷರಾಗಿ ಮೌನೇಶ ತಿಡಿಗೋಳ, ಉಪಾಧ್ಯಕ್ಷರಾಗಿ ತಿರುಮಲ ಆಚಾರಿ ಹಾಗೂ ಅಂಬಣ್ಣ ಗೊರೆಬಾಳ,ಕಾರ್ಯದರ್ಶಿ ಧರ್ಮಣ್ಣ ಗುಂಜಳ್ಳಿ, ಸಂಘಟನಾ ಕಾರ್ಯದರ್ಶಿ ಚನ್ನಪ್ಪ ಕೆ.ಹೊಸಹಳ್ಳಿ,ಖಜಾಂಚಿ ಗಣೇಶ ಸುಕಲಪೇಟೆ. ಸದಸ್ಯರಾಗಿ ಗುರುಮೂರ್ತಿ ಕಂಚುಗಾರ,ಡಾ.ಬಸವರಾಜ ಬೂದಿಹಾಳ,ಕಾಶಿಪತಿ ಜವಳಗೇರ,ಪಂಪಣ್ಣ ಕಲ್ಮಂಗಿ, ಬಸವರಾಜ ಮುಕ್ಕುಂದ, ಮೌನೇಶ ಉಪ್ಪಲದೊಡ್ಡಿ, ಸಿರಸಪ್ಪ ಜಾಲಿಹಾಳ,ಬದ್ರಿನಾಥ ಅಲಬನೂರು,ಸುರೇಶ ಸಾಲಗುಂದಾ,ನಾಗರಾಜ ಉಪ್ಪಳ,ನರಸಿಂಹ ಎಲೆಕೂಡ್ಲಿಗಿ ಅವರನ್ನು ಸಮಾಜದ ಸರ್ವ ಮುಖಂಡರ ಅನುಮತಿ ಮೇರೆಗೆ ಆಯ್ಕೆ ಮಾಡಲಾಯಿತು.