ಆಧುನಿಕ ಜಗತ್ತಿನ ನಾಗಾಲೋಟದೊಂದಿಗೆ ಜನ ಜೀವನ ಓಡುತಿದೆ ಎಗ್ಗಿಲ್ಲದೇ.ಸಂಪತ್ತಿನ ಆಸೆಯೋ ಅಧಿಕಾರದ ದಾಹವೋ ಪ್ರತಿಷ್ಠೆಯ ಹಪಹಪಿಸಿ ಹೆಸರಿಗಾಗಿ ಸಂಬಂಧಗಳ ಕಡೆಗಣೆನೆ ಒತ್ತಡದ ನಡೆಯು ಕಳೆಗುಂದಿಸುತ್ತಿದೆ ಮನ ರಂಗಾದ ಬದುಕು ಭಂಗವಾಗುತ್ತಿದೆ ಸದ್ದಿಲ್ಲದೇ.
ಮಾನವ ಜೀವನದಲ್ಲಿ ನೋವು ಹತಾಶೆಗಳು ಸಹಜ ಇಂದಿನ ದುರ್ಬಲ ಮನ ಸಣ್ಣ ಸಣ್ಣ ವಿಷಯಕ್ಕೆ ಮುಂಗೋಪ ಪ್ರಾಣಾಪಾಯದಂತಹ ಕೃತ್ಯಕ್ಕೆ ಕೈಹಾಕುವ ಖಯಾಲಿ ನಡೆಯುತ್ತಿದೆ.
ಸಭಸ್ಯೆಗಳು ಬಂತೆಂದರೆ ದಿಗಿಲು ಏಕೆ ?ಅದರ ಉಪಶಮನದ ಹಾದಿಗೆ ಗಮನ ಹರಿಸಬೇಕೆ ವಿನಃ ಕೈ ಹೊತ್ತು ಕುಳಿತುಕೊಳ್ಳುವ ಬದಲು ಬುದ್ದಿವಂತಿಕೆಯ ಮಾತು ಕೇಳುವುದು ಹಿತ.ಆದರೆ ಇಂದಿನ ಯುವ ಪೀಳಿಗೆ ಬುದ್ದಿಮಾತಿಗೆ ಓಗೊಡದೇ ಮನೆ ಬಿಟ್ಟು ಹೋಗುವ ಮನಸು ಮಾಡುತ್ತಿದ್ದಾರೆ.
ಬದಲಾಗಬೇಕಿದೆ ಮನ ಮಂದಾರ ಕುಸುಮಗಳು ಭಂಗ ಪಡಿಸುವವರ ಕಡೆಗಣಿಸಿ ನೆಮ್ಮದಿಯ ನಾಳೆಗೆ ಭರವಸೆಯ ಬೆಳಕಾಗಬೇಕಿದೆ. ಹತಾಶೆಯ ಗುಂಗಿನಿಂದ ಹೊರಬಂದು ಜಗತ್ತಿನ ಅನೇಕ ಅವಕಾಶಗಳು ಬಾಚುವ ಅವಶ್ಯಕತೆ ಇದೆ.
ಮಂದಹಾಸದಿ ಮುಂದಿನ ದಿನಗಳನು ಆಸ್ವಾದಿಸ ಬೇಕಾಗಿದೆ. ಬೇಕು ಬೇಡಗಳ ಸರಿಯಾದ ನಿರ್ಧಾರದಿ ಅನಗತ್ಯ ವಿಚಾರಗಳನು ದೂರಿಕರಿಸಬೇಕು. ನಾಳೆಗಳನು ಬಂದಂತೆ ಸ್ವೀಕರಿಸಲು ಸಿದ್ಧರಾಗೋಣ ಬದ್ಧತೆಯ ಬಾಂದವ್ಯಕೆ ಸಿದ್ಧತೆಯ ಶುದ್ಧಿಯಲಿ ಪ್ರಮಾಣೀಕರಿಸಿ. ಕೊಳೆಯ ಕಿತ್ತೆಸೆದು ಸಮಾಲೋಚನೆಯಲಿ ಪರಾಮರ್ಶಿಸಿ ಮುಂದಿನ ನಡೆಯ ನಿರ್ಧಾರವಾಗಬೇಕು. ಕೇಡನು ಸೇಡನು ಬದಿಗಿರಿಸಿ ಹದವಾಗಿಸಿ ಬಾಳ ಪುಟವ ತೆರೆಯಿರಿ ರಂಗಿನ ಕನಸುಗಳೊಂದಿಗೆ ಸಾಧನೆಯ ಶಿಖರವೇರುವುದಕೆ ಸತ್ಸಂಗದ ಜೊತೆಗಿರಲಿ.ಅನವರತ ಪ್ರಯತ್ನ ಪ್ರಯೋಗಗಳು ನಿರಂತರವಿರಲಿ ಬೃಂಗದ ಬೆನ್ನೇರುವ ಬದಲು ಮುದ ನೀಡುವ ರಕ್ಷಿತ ಸಂಬಂಧಗಳೊಂದಿಗೆ ನಡೆ ನುಡಿ ಒಂದಾಗಿಸಿ ರಗಂಗಾಗಿರಲಿ ಕಳೆಗುಂದದೇ ಏನೆ ಬಂದರೂ ಎದುರಿಸುವ ಧೈರ್ಯವಿರಲಿ ಕಳೆ ಗುಂದಿದ ಮನವ ತಿಕ್ಕಿ ತೊಳೆದು ಮಿನುಗುವ ನಕ್ಷತ್ರವಾಗಲಿ ಬದುಕಿನ ಜಂಜಡವ ಕಳೆಯಲು ಉತ್ತಮ ಹವ್ಯಾಸ ನಂಬಿಕೆಯ ಒಡನಾಟದೊಂದಿಗೆ ಸಾಗಬೇಕಿದೆ.
ರೇಷ್ಮಾ ಕಂದಕೂರ ಶಿಕ್ಷಕಿ ಸಿಂಧನೂರು