ಮಸ್ಕಿ ಜುಲೈ 18. ಲಿಂಗಸುಗೂರ ಮುದಬಾಳ ಕ್ರಾಸ ವರೆಗಿನ ರಾಷ್ಟ್ರೀಯ ಹೆದ್ದಾರಿ 150 ದ್ವಿಪಥ ರಸ್ತೆ ಹಾಗೂ ಮಸ್ಕಿ ಪಟ್ಟಣದ ರಸ್ತೆ ಅಗಲೀಕರಣ ಹಾಗೂ ರಸ್ತೆ ವಿಭಜಕದ ನಿರ್ಮಾಣ,ಸಿಂಧನೂರು ಮಸ್ಕಿ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಸುಮಾರು ಏಳು ನೂರಾ ಹನ್ನೊಂದು ಕೋಟಿ ಹಣ ಬಿಡುಗಡೆಯಾಗಿದೆ ಇಷ್ಟು ದೊಡ್ಡಮಟ್ಟದ ಹಣ ಬಿಡುಗಡೆಯಾಗಿರುವುದು ಈ ಭಾಗದ ಇತಿಹಾಸದಲ್ಲೇ ಮೊದಲೆನ್ನಬಹುದೆಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿಯವರು ಬಣ್ಣಿಸಿದರು.
ಇಂದು ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮಸ್ಕಿಯ ಗಚ್ಚಿನಮಠದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಹೆದ್ದಾರಿ ಅಗಲೀಕರಣ ಮತ್ತು ರಸ್ತೆ ವಿಭಜಕದ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಈ ರಸ್ತೆ ಮಸ್ಕಿ ಪಟ್ಟಣದಲ್ಲಿ ಸುಮಾರು ಎರಡು ಕಿಲೋಮೀಟರನಷ್ಟು ಹಾದು ಹೋಗಲಿದೆ, ಇದು ಮೂವತ್ತು ಮೀಟರ್ ಅಗಲ ಇರಲಿದೆ, ಇದರ ನಿರ್ಮಾಣದಿಂದ ಪಟ್ಟಣದ ಟ್ರಾಫಿಕ ಕಡಿಮೆಯಾಗುವದರೊಂದಿಗೆ ಅಪಘಾತಗಳು ಕಡಿಮೆಯಾಗಿ ಸಂಚಾರ ಸರಾಗವಾಗಲಿದೆ ಎಂದರು.
ಇದೇ ಕಾಮಗಾರಿಗೆ ಮಸ್ಕಿಯ ಶಾಸಕ ಆರ್,ಬಸನಗೌಡ ತುರುವಿಹಾಳರೂ ಮೊನ್ನೆ ಚಾಲನೆ ನೀಡಿದರು ಒಂದೇ ಕಾಮಗಾರಿಗೆ ಎರಡೆರಡುಬಾರಿ ಏಕೆ ಚಾಲನೆ,..? ಎಂಬ ವರದಿಗಾರರ ಪ್ರಶ್ನೆಗೆ ಈ ಕಾರ್ಯಕ್ರಮಕ್ಕೆ ಅವರಿಗೂ ಆಹ್ವಾನ ನೀಡಿದ್ದೆವು,ಸಂತೆಕೆಲ್ಲೂರಿನಲ್ಲಿ ನಡೆದ ಕಾರ್ಯಕ್ರಮಕ್ಕೂ ಆಹ್ವಾನ ನೀಡಿದ್ದೆವು ಆದರೆ ಅವರು ಬಂದಿಲ್ಲ.
ಮೊನ್ನೆ ಅವರು ಮಾಡಿದ ಕಾರ್ಯಕ್ರಮ ನಮ್ಮ ಗಮನಕ್ಕಿಲ್ಲ ಎಂದು ಅವರು ಹೇಳುವ ಮೂಲಕ ಶಾಸಕ ಸಂಸದರ ಮಧ್ಯ ಸಂಪರ್ಕದ ಕೊರತೆಯಿದೆ ಎಂಬುದು ತಿಳಿದು ಬಂತು ಒಟ್ಟಿನಲ್ಲಿ ಮಸ್ಕಿಯ ರಸ್ತೆ ಅಭಿವೃದ್ದಿಯಾಗಿ ಸಂಚಾರ ಸುಲಭವಾಗಿ ಜನರಿಗೆ ಅನುಕೂಲವಾದರೆ ಸಾಕೆಂಬ ಬಯಕೆ ಮಸ್ಕಿ ನಾಗರಿಕರದ್ದಾಗಿದೆ.
ಈ ಕಾರ್ಯಕ್ರಮದಲ್ಲಿ ಮಸ್ಕಿಯ ಮಾಜಿ ಶಾಸಕರಾಗಿರುವ ಪ್ರತಾಪಗೌಡ ಪಾಟೀಲ್,ಹಿರಿಯ ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್,ಅಂದಾನಪ್ಪ ಗುಂಡಳ್ಳಿ,ಡಾ,ಬಸಲಿಂಗಪ್ಪ ದಿವಟರ್,ಮಸ್ಕಿ ಮಂಡಲ ಬಿ,ಜೆ,ಪಿ,ಯ ಪ್ರಧಾನ ಕಾರ್ದರ್ಶಿಗಳಾದ ಶರಣಯ್ಯಸ್ವಾಮಿ ಸೊಪ್ಪಿಮಠ,ಕೌನ್ಸುಲರ್ ಮಲ್ಲಯ್ಯ ಅಂಬಾಡಿ, ಮತ್ತು ಮಸ್ಕಿ ಪುರಸಭೆಯ ಇತರ ಸದಸ್ಯರು,ಹಾಗೂ ಹಿರಿಯ ಮುಖಂಡರು ಕಾರ್ಯದರ್ಶಿಗಳು ಸೇರಿದಂತೆ ಹಲವರಿದ್ದರು.
ವರದಿ,,,ಎಸ್ ನಜಿರ್ ಮಸ್ಕಿ