ಮೇ 22. ಅಮೃತವರ್ಷಿಣಿ ಖ್ಯಾತಿಯ ಬಹುಭಾಷಾ ನಟ ಶರತ್ ಬಾಬು ನಿಧನ ಶರತ್ ಬಾಬು ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಾದ ಕನ್ನಡ ಮಲಯಾಳಂ ತಮಿಳು ಮತ್ತು ತೆಲುಗಿನಲ್ಲಿ ನಟಿಸಿರುವ ಭಾರತದ ಪ್ರಸಿದ್ಧ ಚಲನಚಿತ್ರ ನಟ ಅವರು ಚಿತ್ರೋದ್ಯಮದಲ್ಲಿ ಸುಮಾರು ಸುಮಾರು 35 ವರ್ಷದಿಂದ ತೊಡಗಿಸಿಕೊಂಡಿದ್ದಾರೆ ಮತ್ತು ಎರಡು ನೂರಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲಾಗಿದ್ದರು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದಿಗೆ ಕರೆದೊಯ್ಯಲಾಗಿತ್ತು. ಅದಾದಮೇಲೆ ಅಲ್ಲಿ ಮತ್ತೆ ಅವರು ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಗಿದ್ದರೆಂದ ಏಪ್ರಿಲ್ 20ರ ಸುಮಾರಿಗೆ ಹೈದರಾಬಾದಿನ ಗಚ್ಚು ಬಲಿಯ ಎಐಜಿ ಖಾಸಗಿ ಆಸ್ಪತ್ರೆಗೆ ದಾಖಿಸಲಾಗಿತ್ತು ಆರೋಗ್ಯ ಸ್ವೀಟಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯು ವಾರ್ಡಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ಸತತ ಪ್ರಯತ್ನಗಳು ಫಲ ನೀಡದ ಶರತ್ ಬಾಬು ಇಹಾಲೋಕ ತ್ಯಜಿಸಿದ್ದಾರೆ.
1973ರಲ್ಲಿ ಚಿತ್ರರಂಗ ಪ್ರವೇಶಿಸಿದ ಶರತ್ ಬಾಬು ಹಲವು ಭಾಷೆಗಳಲ್ಲಿ ಬಹು ಜನಪ್ರಿಯ ನಟರಾಗಿ ನಟಿಸಿದ್ದಾರೆ ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ ತುಳಿಸಿದಳ, ರಣಚಂಡಿ, ಶಕ್ತಿ, ಗಾಯ, ಕಂಪನ, ಹೃದಯ-ಹೃದಯ ನಮ್ಮ ಯಜಮಾನರು, ಸೇರಿದಂತೆ ಅಮೃತವರ್ಷಿಣಿ ಸಿನಿಮಾದಲ್ಲಿ ಪಾತ್ರವನ್ನು ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ.