ನವಂಬರ್ 01.ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 50 ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು .
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮುರುಡಯ್ಯ ಸ್ವಾಮಿ ಅವರು ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯ ಮತ್ತು ಭಾಷೆ ಹಾಗೂ ಸಂಸ್ಕೃತಿಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕನ್ನಡವೂ ಅಲ್ಲಲ್ಲಿ ಮಾತ್ರ ಕಂಡು ಬರುತ್ತಿದೆ. ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರ ಆದ್ಯತೆಯ ಭಾಷೆ ಕನ್ನಡವಾಗಿರಬೇಕು. ಕನ್ನಡವೇ ನಮ್ಮ ಉಸಿರಾದಾಗ ಮಾತ್ರ ಕರ್ನಾಟಕ ಹೆಸರಾದಂತೆ ಕನ್ನಡ ಭಾಷೆ ಹೆಸರಾಗುತ್ತದೆ ಹಸಿರಾಗುತ್ತದೆ ಎಂದು ವಿವರಿಸಿದರು. ಪ್ರಾಧ್ಯಾಪಕರಾದ ವಿಜಯಕುಮಾರ, ರಡ್ಡೆಪ್ಪ ಹಳ್ಳಿ, ಚಂದ್ರಶೇಖರ್ ವಲ್ಕಂದಿನ್ನಿ, ಕಾಳಿಂಗರೆಡ್ಡಿ, ಡಾ. ಹುಸೇನಪ್ಪ ಅಮರಾಪುರ ಮತ್ತು ವೆಂಕಟೇಶ್ ಬುಕ್ಕನಟ್ಟಿ ಮುಂತಾದವರು ಹಾಜರಿದ್ದರು.