ಏ 06. ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಶ್ರೀ ಡೇರೆದ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಳಸ ಡೊಳ್ಳು,ವಾದ್ಯಗಳೊಂದಿಗೆ ಅದ್ದೂರಿಯಾಗಿ ಜರುಗಿತು
ಶ್ರೀ ಡೇರೆದ ನಾಗಲಿಂಗೇಶ್ವರರು ಏಳೆಂಟು ಊರುಗಳಲ್ಲಿ ಪ್ರತ್ಯಕ್ಷನಾಗಿ ಪವಾಡ ಮಾಡಿದ ಪುರುಷರು ಅವರು, ಶ್ರೀ ಗುರು ಜಡಿಸಿದ್ದೇಶ್ವರ ತಾತನವರ ಪರಮ ಭಕ್ತರಾಗಿದ್ದರು, ಬೇಸಿಗೆಯಲ್ಲಿ ಕರ್ಚಿಕಾಯಿಗಳನ್ನು ತೋರಿಸಿ ಪವಾಡ ಮೆರೆದವರು ಕೆ.ಹೊಸಹಳ್ಳಿಯ ಡೇರೆದ ನಾಗಲಿಂಗೇಶ್ವರರು.ಪ್ರತಿ ವರ್ಷ ದವನದ ಹುಣ್ಣಿಮೆ ದಿನದಂದು ನಡೆಯುವ ಇವರ ಜಾತ್ರೆ ಇಂದು ಕೂಡಾ ಸಾವಿರಾರು ಸಂಖ್ಯೆಯ ಭಕ್ತಾಧಿಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡರು. ಬೆಳಗ್ಗೆ ಶ್ರೀ ನಾಗಲಿಂಗೇಶ್ವರ ಮೂರ್ತಿಗೆ ಅಭಿಷೇಕ,ಪುಷ್ಪಾರ್ಚನೆಯ ಮೂಲಕ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ರಥೋತ್ಸವದ ಕಳಸ, ಆಹಾರಗಳನ್ನು ಸಾಯಂಕಾಲ 5ಗಂಟೆಗೆ ಕಳಸ ಡೊಳ್ಳು, ವಾದ್ಯಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸುತ್ತಮುತ್ತಲಿನ ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇಸಿಕೊಳ್ಳಲು ಭಕ್ತಿ ಭಾವದಿಂದ ಹಣ್ಣು,ಹೂ, ಕಾಯಿಗಳನ್ನು ಒಡೆಯುವ ದೇವರಿಗೆ ಅರ್ಪಿಸಿದರು.ಇದೇ ಸಂದರ್ಭದಲ್ಲಿ ಗ್ರಾಮದೆಲ್ಲೆಡೆ ಸಡಗರ ಸಂಭ್ರಮಾಚರಣೆ ಮೊಳಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಪ್ರಸಾದ ವ್ಯವಸ್ಥೆ ನೆರವೇರಿತು. ಸಂಜೆ 7ಗಂಟೆಗೆ ಊರಿನ ಪರಮ ಪೂಜ್ಯರು ಹಾಗೂ ಹಿರಿಯರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಊರಿನ ಪರಮ ಪೂಜ್ಯರು ಹಾಗೂ ಹಿರಿಯರು,ಮಹಿಳೆಯರು ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.