ಮಸ್ಕಿ : ನವರಾತ್ರಿ ಉತ್ಸವ ನಿಮಿತ್ತ ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುರಾಣ ಮಂಗಲ ಹಾಗೂ ದೇವಿಯ ರಥೋತ್ಸವ
ವೈಭವದಿಂದ ನಡೆಯಿತು.
ನೂರಾರು ಮಹಿಳೆಯರು ರಥ ಎಳೆಯುವ ಮೂಲಕ ಭ್ರಮರಾಂಬಾ ದೇವಿಯ ಕೃಪೆಗೆ ಪಾತ್ರರಾದರು.
ಸಂಜೆ 5 ಗಂಟೆಗೆ ಗಚ್ಚಿನಮಠದ ವರ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ ಗಳ ನೇತೃತ್ವದಲ್ಲಿ
ಭ್ರಮರಾಂಬಾ ದೇವಿಯ ಉತ್ಸವ ಮೂರ್ತಿಯನ್ನು
ರಥದ ಸುತ್ತ ಐದು ಬಾರಿ ಸುತ್ತು ಹಾಕಿದ ನಂತರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನೂರಾರು ಭಕ್ತರ ಜಯಘೋಷಗಳ ನಡುವೆ ಭ್ರಮರಾಂಬಾ ದೇವಿಯ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.
ಮಸ್ಕಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ರಥದ ಮಿಣಿ ಹಿಡಿದು ಎಳೆಯತೊಡಗಿದರು.
ಹೆದ್ದಾರಿ ಪಕ್ಕದಲ್ಲಿ ಇರುವ
ಪಾದಗಟ್ಟೆವರೆಗೆ ರಥ ಎಳೆದು
ವಾಪಸು ಭ್ರಮರಾಂಬಾ ದೇವಸ್ಥಾನಕ್ಕೆ ತರಲಾಯಿತು.
ಮಹಿಳೆಯರು ರಥ ಎಳೆಯುತ್ತಿದ್ದರೆ ಪುರುಷರು ರಥಕ್ಕೆ ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸ್ವಾಮಿ ಶಾರದೇಶಾನಂದಜಿ ಮಹಾರಾಜ ರಾಮಕೃಷ್ಣ ವಿವೇಕಾನಂದಾಶ್ರಮ ಹರಿಹರ,ಶಾಸಕ ಆರ್.ಬಸವನಗೌಡ ತುರುವಿಹಾಳ,ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ,ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ,ತಹಶೀಲ್ದಾರ್ ಡಾ ಮಲ್ಲಪ್ಪ ಕೆ ಯರಗೋಳ
ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ,ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಉಪಾಧ್ಯಕ್ಷರಾದ ಗೀತಾ ಶಿವರಾಜ,ರವಿಗೌಡ ಪೊಲೀಸ್ ಪಾಟೀಲ, ಬಸವನಗೌಡ ಪೊಲೀಸ್ ಪಾಟೀಲ,
ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ಡಿ.ಲಕ್ಕಂ,ಪಿ.ಎಸ್.ಐ.ತಾರಬಾಯಿ,
ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ,ಸೇರಿದಂತೆ
ಪುರಸಭೆ ಸದಸ್ಯರು,ಅನೇಕ ಮುಖಂಡರು ಹಾಗೂ ಭ್ರಮರಾಂಬ ದೇವಿಯ ಭಕ್ತರು
ಭಾಗವಹಿಸಿದ್ದರು.
ವರದಿ : ಎಚ್.ಕೆ.ಬಡಿಗೇರ್