ಸಿರುಗುಪ್ಪ,ಮೇ.08 ಬುಧವಾರ ದಂದು ನಡೆಯುವ ಸಾರ್ವತ್ರಿಕ ಮತದಾನ ಅಂಗವಾಗಿ ನಗರಸಭೆ ಪೌರಾಯುಕ್ತ ಜೀವನ್ ಅವರು ನಗರದ ವಿವಿಧ ಮತಗಟ್ಟೆಗಳಿಗೆ ತೆರಳಿ ಕೇಂದ್ರಗಳ ಸುತ್ತಲಿನ ವಾತಾವರಣ ಸ್ವಚ್ಛತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮತಗಟ್ಟೆಗಳಲ್ಲಿ ವೀಕ್ಷಿಸಿದರು.
ನಂತರ ಮಾತನಾಡಿದ ಅವರು ನಗರದ ಸರ್ಕಾರಿ ನೌಕರರ ಭವನ, 7,8ನೇ ವಿಭಾಗದ ಹಿರಿಯ ಪ್ರಾಥಮಿಕ ಶಾಲೆ, ಸೇರಿದಂತೆ ವಿವಿಧೆಡೆ ಪೌರಕಾರ್ಮಿಕರಿಂದ ಮತಗಟ್ಟೆಗಳ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆ ಕಾರ್ಯ ನಡೆದಿದೆ.
ಮತದಾನದ ಕಾರ್ಯದಲ್ಲಿನ ಸಿಬ್ಬಂದಿಗಳು, ಹಾಗೂ ಮತದಾರರಿಗೆ ಗಾಳಿ, ಬೆಳಕು ಅವಶ್ಯಕತೆಯಿದ್ದು, ವಿದ್ಯುತ್ ಪೂರೈಕೆ, ಶೌಚಾಲಯದ ವ್ಯವಸ್ಥೆಯೊಂದಿಗೆ ಹಿರಿಯ ನಾಗರಿಕರಿಗೆ ವಿಶ್ರಾಂತಿಗಾಗಿ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗುವುದೆಂದು ತಿಳಿಸಿದರು.
ಇದೇ ವೇಳೆ ನಗರಸಭೆ ಎಇಇ ಗಂಗಾಧರ ಗೌಡ, ಹಿರಿಯ ಆರೋಗ್ಯ ನಿರೀಕ್ಷಕ ರಂಗಸ್ವಾಮಿ ಇನ್ನಿತರರು ಇದ್ದರು.