ವರದಿ : ಎಚ್.ಕೆ.ಬಡಿಗೇರ್
ಬಡವರ ಬಾರುಕೋಲು ಸುದ್ದಿ
ಮಸ್ಕಿ : ಪಟ್ಟಣದ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ದಿನಾಂಕ 19/12/2024 ಗುರುವಾರ ದಂದು ಬೆಳಿಗ್ಗೆ 10 ಗಂಟೆಯಿಂದ 3 ಗಂಟೆಗೆ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿ,ಆಂತರಿಕ ಗುಣಮಟ್ಟ ಭರವಸಾ ಕೋಶ (IQAC CELL) ಮತ್ತು ಉದ್ಯೋಗ ಭರವಸಾ ಕೋಶ (PLACEMENT CELL) ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ಇವರುಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.ಆದಕಾರಣ SSLC,PUC,NTC,D.Ed, B.Ed,B,PED,BA,B.COM,MA, M.COM,M.SC,BSW,MSW, MA,MBA,BBA,BCA,ITI, DIPLOMA,PHARMACY,BE, M,TECH ಮುಂತಾದ ಪದವಿಗಳನ್ನು ಪಡೆದಿರುವಂತಹ ಉದ್ಯೋಗಾಕಾಂಕ್ಷಿಗಳು ಆಗಿರುವ ಯುವಕ ಯುವತಿಯರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಹಾಗೂ ಈ ಮೇಳದಲ್ಲಿ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಶಾಲಾ,ಕಾಲೇಜುಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹಾಗೂ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ನೇರ ನೇಮಕವಾಗುವ ಸುವರ್ಣಾವಕಾಶ ಇದಾಗಿದೆ.
ಅದಕ್ಕೋಸ್ಕರ ನಮ್ಮ ಕಾಲೇಜಿನ ಹಳೆಯ ಹಾಗೂ ಈಗಿರುವ ವಿದ್ಯಾರ್ಥಿಗಳಷ್ಟೇ ಅಲ್ಲದೆ ಅರ್ಹ ಯಾವುದೇ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾಗಿರುವ ಡಾಕ್ಟರ್ ಮಹಾಂತಗೌಡ ಪಾಟೀಲ್ ಪತ್ರಿಕಾ ಪ್ರಕಟಣೆಯ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕರೆಕೊಟ್ಟಿದ್ದಾರೆ.
ಈ ಮೇಳಕ್ಕೆ ಆಗಮಿಸುವ ಆಕಾಂಕ್ಷಿಗಳು 10 ಪ್ರತಿಗಳಲ್ಲಿ ತಮ್ಮ ಸ್ವವಿವರವುಳ್ಳ ಪ್ರಮಾಣಪತ್ರ,ವಿದ್ಯಾರ್ಹತೆಯ ಪ್ರಮಾಣಪತ್ರಗಳು,ಆಧಾರ್ ಕಾರ್ಡ್,ಪ್ಯಾನ್ ಕಾರ್ಡ್,ಗಳ ಝರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು.
ಇನ್ನೂ ಈ ಉದ್ಯೋಗ ಮೇಳದ ಉಸ್ತುವಾರಿಯನ್ನು ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಉದ್ಯೋಗ ಭರವಸಾ ಕೋಶದ ಸಂಚಾಲಕರು ಆಗಿರುವ ಯಾಳಗಿ ಶ್ರೀನಿವಾಸ,ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರು ಹಾಗೂ ಸಹಾಯಕ ಪ್ರಾಧ್ಯಾಪಕರಾಗಿರುವ ರೋಹಿಣಿಮೂರ್ತಿ ಯವರು ವಹಿಸಲಿದ್ದಾರೆ. ಇದರ ಜೊತೆಗೆ ನಮ್ಮ ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು,ಪ್ರಾಧ್ಯಾಪಕರು,ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ವಿವಿದ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಆದ್ದರಿಂದ ಇದರ ಸದುಪಯೋಗವನ್ನು ಸರ್ವ ಪದವಿದರ ನಿರುದ್ಯೋಗಿಗಳು ಪಡೆದುಕೊಳ್ಳಬೇಕೆಂದು ಕರೆಕೊಟ್ಟಿದ್ದಾರೆ.
11ನೇ ವರ್ಷದ ಶ್ರೀ ಗಣೇಶಗಾಯಿತ್ರಿ ಮಾತೆಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಶ್ರೀ ಸದಾನಂದ ಶ್ರೀಗಳಿಂದ ಆಹ್ವಾನ