ರಾಯಚೂರು,ಏ.13 ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಸಾಮಾಜಿಕ ಭದ್ರತಾ ಸಹಾಯಕ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಏ.26ರೊಳಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದೆಂದು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಆದರೆ ಪ್ರತಿ ಹುದ್ದೆಯ ಪರಿಕ್ಷಾ ಶುಲ್ಕವನ್ನು ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ.
ಸಾಮಾಜಿಕ ಭದ್ರತಾ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಹಾಗೂ ಟೈಪಿಂಗ್ನ ವೇಗವು ಪ್ರತಿ ನಿಮಿಷಕ್ಕೆ 35 ಪದಗಳಿಗಿಂತ ಹೆಚ್ಚಿರಬೇಕು. ಒಟ್ಟು 2674 ಹುದ್ದೆಗಳು ಖಾಲಿ ಇದ್ದು, 18ರಿಂದ 27 ವರ್ಷದೊಳಗಿನ ಅರ್ಹ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸಾಮಾಜಿಕ ಭದ್ರತಾ ಸಹಾಯಕರ ಹುದ್ದೆಗೆ 29,200ರಿಂದ 92,300 ವರೆಗೆ ವೇತನವನ್ನು ನೀಡಲಾಗುವುದು.
ಸ್ಟೇನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 12ನೇ ತರಗತಿ(ಪಿ.ಯು.ಸಿ) ಪಾಸಾಗಿದ್ದು, ಕವಶಲ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಟ್ಟು 185 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ 25,500ರಿಂದ 81,100 ರವರೆಗೆ ವೇತನವನ್ನು ನೀಡಲಾಗುವುದು.
ಎಸ್.ಸಿ, ಎಸ್.ಟಿ, ಮಾನದಂಡದ ವಿಕಲಾಂಗ ವ್ಯಕ್ತಿಗಳು, ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ ಹಾಗೂ ಇತರೆ ಅಭ್ಯರ್ಥಿಗಳಿಗೆ ಪ್ರತಿ ಅರ್ಜಿಗೆ 700 ರೂ.ಗಳ ಅರ್ಜಿ ಶುಲ್ಕ ಪಾವಿತಿಸಬೇಕಾಗುತ್ತದೆ. ಅರ್ಜಿಗಳನ್ನು www.epfindia.gov.in CxÀªÁ http://recuitment.nta.nic.in UÉ ಗೆ ಭೇಟಿ ನೀಡಿ ಏ.26ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.